Wednesday, February 4, 2026
Flats for sale
Homeರಾಜ್ಯವಿಜಯನಗರ : ಹಂಪಿ ಪ್ರವಾಸಕ್ಕೆ ತೆರಳಿದ್ದ ಕೇರಳದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿ,ಹಲವರಿಗೆ ಗಾಯ.

ವಿಜಯನಗರ : ಹಂಪಿ ಪ್ರವಾಸಕ್ಕೆ ತೆರಳಿದ್ದ ಕೇರಳದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿ,ಹಲವರಿಗೆ ಗಾಯ.

ವಿಜಯನಗರ : ಕೇರಳದಿಂದ ಹಂಪಿಗೆ ಬರ್ತಿದ್ದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿಯಾಗಿದೆ. ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು ಇವರು ಮಂಗಳೂರಿನಿಂದ‌ ಹಂಪಿ ಪ್ರವಾಸಕ್ಕೆ ಹೊರಟಿದ್ದರೆಂದು ತಿಳಿದುಬಂದಿದೆ.

ಬಸ್ಸಿನಲ್ಲಿ ಕೇರಳ ಮೂಲದ ಶ್ರೀಕೃಷ್ಣ ಕಾಲೇಜಿನ 32 ಜನ ವಿದ್ಯಾರ್ಥಿಗಳಿದ್ದು 7 ಜನ ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ವನುಕೃಷ್ಣ, ಅನುಗ್ರಹ, ಆದಿತ್ಯಾ, ಅಜಯ್ ರಾಜ, ಅದುಲ್ ಕೃಷ್ಣ , ನುಹಾದ್ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು ಶಿಕ್ಷಕಿಯ ಕಾಲಿಗೆ ಗಂಭೀರ ಗಾಯಗಳಾಗಿವೆ.

ಈ ಬಸ್ಸಿನಲ್ಲಿರುವವರು ಪಡುಬಿದ್ರೆ ಟೋಲ್ ನಲ್ಲಿ ರಾಟ್ಸ್ ಮದ್ಯೆ ಬಸ್ಸನ್ನಿಟ್ಟು ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದರು.ಇದೀಗ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೂಡಿಸಿ, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular