ವಿಜಯನಗರ ; ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ದಂಪತಿ ವಿಷ ಕುಡಿದು ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಸ್ನಾನಘಟ್ಟ ಬಳಿ ಸರಸ್ವತಿ ದೇವಸ್ಥಾನ ಬಳಿ ನಡೆದಿದೆ.
ಪತ್ನಿ ಸೌಮ್ಯ, ಮಗಳು ಭವಾನಿ,ಮಗ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದುಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ ಯಜಮಾನ ಚಂದ್ರಯ್ಯ (42) ಸಾವನಪ್ಪಿದ್ದಾರೆ.
ಮೃತ ಚಂದ್ರಯ್ಯರವರು ವಿಜಯನಗರ ಜಿಲ್ಲೆಯ ಕೊಟ್ಟೂರ ಪಟ್ಟಣದ ನಿವಾಸಿಯಾಗಿದ್ದು ಕಳೆದ 6 ವರ್ಷಗಳಿಂದ ಕೊಟ್ಟೂರ ಪಟ್ಟಣದಲ್ಲಿ ಎಸ್. ಬಿ. ಐ. ಸೇವಾ ಕೇಂದ್ರ ನಡೆಸುತ್ತಿದ್ದರು. 10 ಲಕ್ಷಕ್ಕೂ ಅಧಿಕ ಚಂದ್ರಯ್ಯ ಕೈ ಸಾಲ ಮಾಡಿಕೊಂಡಿದ್ದು ಸಾಲಗಾರರ ಕಿರುಕುಳದಿಂದ ಬೇಸತ್ತು ಕೊಟ್ಟೂರಿನಿಂದ ನಿನ್ನೆ ಹಂಪಿಗೆ ಕುಟುಂಬ ಸಮೇತ ಬಂದಿದ್ದರು.ಇಂದು ಕುಂಟುಂಬ ಬೆಳಿಗ್ಗೆ ಹಂಪಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆ ದಾಖಲಿಸಿದ್ದರು. ಈ ಬಗ್ಗೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


