ವಿಜಯನಗರ : ರಾಜ್ಯದ ವಿಜಯಪುರ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ 10 ಕ್ಕೂ ಹೆಚ್ಚು ಕಾರ್ಮಿಕರು ನೂರಾರು ಗೋಣಿಚೀಲಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದ್ದು ಗೋದಾಮಿನಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ ಸಿಲುಕಿರುವ 10ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತಿತ್ತು ಆದರೆ ಈ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ: ಮೆಕ್ಕೆ ಜೋಳದ ನಾಲ್ಕು ಜೋಡಿ ಸಾಲ್ಟಿಂಗ್ ಮಾಡುವ ಸ್ಟೋರೇಜ್ ಕುಸಿತವಾಗಿದ್ದು, ಒಂದು ಸ್ಟೋರೇಜ್ನಲ್ಲಿ 120 ಟನ್ ಮೆಕ್ಕೆಜೋಳ ಸಂಗ್ರಹಣೆವಾಗುತ್ತದೆ. ಒಟ್ಟು ನಾಲ್ಕು ಜೋಡಿ ಸ್ಟೋರೇಜ್ಗಳಲ್ಲಿ 480 ಟನ್ ಗೋವಿನ ಸಂಗ್ರಹಣೆ ಮಾಡಲಾಗಿತ್ತು. ಪ್ರಮಾಣಕ್ಕಿಂತ ಅಧಿಕ ಸಂಗ್ರಹಣೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಗೋದಾಮಿನಲ್ಲಿ ನೂರಾರು ಚೀಲ ಧಾನ್ಯಗಳ ಅಡಿಯಲ್ಲಿ ಕನಿಷ್ಠ 10 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಜೋಳದ ಸಂಸ್ಕರಣಾ ಘಟಕ ಸೋಮವಾರ ಸಂಜೆ ಕುಸಿದು ಬಿದ್ದ ನಂತರ ಚೀಲಗಳಲ್ಲಿ ಧಾನ್ಯಗಳು ತುಂಬಿವೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಬಿಹಾರ ಮೂಲದ ಗುಲಾರ್ ಚಂದ್ (50), ಕೃಷ್ಣಕುಮಾರ್ (22), ರಾಮ್ ಬಾಲಕ್ (52), ಲುಖೋ ಜಾಧವ್(45), ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ(29), ಸಂಬೂ ಮುಖಿಯಾ (26) ಮೃತ ಕಾರ್ಮಿಕರು. ಸೋನುಕುಮಾರ್ ಎಂಬುವುರನ್ನು ರಕ್ಷಿಸಲಾಗಿದೆ. ರಾಶಿಯೊಳಗೆ ಇನ್ನೂ 6 ರಿಂದ 7 ಜನ ಕಾರ್ಮಿಕರು ಸಿಲುಕಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಎರಡು ಎಸ್ಡಿಆರ್ಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಇದೀಗ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಕೂಡ ಆಗಮಿಸಿದೆ.
ರಾಜಗುರು ಗೋದಾಮು ಬಳಿ ಶವ ತೆಗೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ನ್ನು ತಡೆದ ಬಿಹಾರ ಮೂಲದ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮೊದಲು ಪರಿಹಾರ ಘೋಷಿಸಿ ನಂತರ ಶವ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರ ಜೊತೆ ಬಿಹಾರ ಮೂಲದ ಕಾರ್ಮಿಕರು ವಾಗ್ವಾದ ನಡೆಸಿದರು. ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮತ್ತು ಎಸ್ಪಿ ಋಷಿಕೇಷ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದಾರೆ.


