ವಿಜಯನಗರ : ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಗೆ ವಿಜಯನಗರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ 7 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.
14/03/2020 ರ ಬೆಳಗಿನ ಜಾವ 1.20 ರ ವೇಳೆ ಪೊಲೀಸ್ ಪೇದೆ ಮತ್ತಣ್ಣ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಆರೋಪಿತರಾದ ಅಣ್ಣಪ್ಪ, ಶ್ರೀಕಾಂತ ಹಾಗೂ ಮೌಲಾ ಹುಸೇನ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.ತಡರಾತ್ರಿಯಾಗಿದೆ ಮನೆಗೆ ಹೋಗಿ ಎಂದಿದ್ದಕ್ಕೆ ಪೇದೆ ಮತ್ತಣ್ಣ ಅವರ ಮೇಲೆ ಹಲ್ಲೆ ಅರೋಪಿತರು ಮಾಡಿದ್ದರು.ಈ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪಿ. ಕುಮಾರಸ್ವಾಮಿ ಅವರು ಆರೋಪಿತರಿಗೆ ಶಿಕ್ಷ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಟಿ ಅಣ್ಣಪ್ಪರವರು ಸಮರ್ಥ ವಾದ ಮಂಡಿಸಿದ್ದರು.


