ವಾಷಿಗ್ಟಂನ್ : ಈ ವರ್ಷದ ನವಂರ‍್ನಲ್ಲಿ ನಡೆಯಲಿರುವ ಅಮೇರಿಕಾ ಅಧ್ಯಕ್ಷ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗುವ ತವಕದಲ್ಲಿದ್ದಾರೆ. ಒಂದು ವೇಳೆ ತಾವು ಅಧ್ಯಕ್ಷರಾಗಲು ಸಾಧ್ಯವಾಗದಿದ್ದರೆರಕ್ತದ ಸ್ನಾನವಾಗಲಿದೆ ಎನ್ನುವ ಎಚ್ಚರಿಕೆ ಸಂದೇಶ ರವಾನಿಸಿದ್ಧಾರೆ.
ಓಹಿಯೋದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ನವೆAಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಅಮೇರಿಖಾದ ಇತಿಹಾಸದಲ್ಲಿ “ಅತ್ಯಂತ ಪ್ರಮುಖ ದಿನಾಂಕ” ಶ್ವೇತಭವನಕ್ಕಾಗಿ ತಮ್ಮ ಅಭಿಯಾನ ದೇಶಕ್ಕೆ ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿಯಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಕೆಲವು ದಿನಗಳ ನಂತರ ಪ್ರತಿಕ್ರಿಯೆ ನೀಡಿದ ದೊನಾಲ್ಡ್ ಟ್ರಂಪ್ ಅವರು ಈ ಬಾರಿ ತಾವು ಅಧ್ಯಕ್ಷರಾಗಿ ಚುನಾಯಿತರಾಗದಿದ್ದರೆ “ರಕ್ತಸ್ನಾನ”ವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 5 ರಂದು ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನಾಂಕವಾಗಲಿದೆ ಎಂದು 77 ವರ್ಷ ವಯಸ್ಸಿನ ಟ್ರಂಪ್ ಹೇಳಿದ್ದು ಪ್ರತಿಸ್ಪರ್ಧಿ, ಅಧ್ಯಕ್ಷ ಜೋ ಬಿಡೆನ್ ಅವರ ಕೆಟ್ಟ ಆಡಳಿತ ಅಂತ್ಯಗೊಳಿಸಲು ಉತ್ತಮವಾದ ದಿನ ಎಂದಿದ್ದಾರೆ.
ತಾವು ಈ ಬಾರಿಯ ಚುನಾವಣೆಯಲ್ಲಿ ಚುನಾಯಿತನಾಗದಿದ್ದರೆ ಅದು ಇಡೀ ರಕ್ತಪಾತವಾಗುತ್ತದೆ, ಅದು ಅದರಲ್ಲಿ ಕನಿಷ್ಠ ವಾಗಿರುತ್ತದೆ, ದೇಶಕ್ಕೆ ರಕ್ತಪಾತವಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ನವೆಂಬರ್ ನಲ್ಲಿ ಅವರಿಗೆ ಮತ್ತೊಂದು ಚುನಾವಣಾ ಸೋಲನ್ನು ಎದುರು ನೋಡಲು ಸಾದ್ಯವಿಲ್ಲ. ಉಗ್ರವಾದ, ಹಿಂಸೆಯ ಮೇಲಿನ ಪ್ರೀತಿ ಮತ್ತು ಸೇಡು ತೀರಿಸಿಕೊಳ್ಳು ಸಕಾಲ ಎಂದು ಟ್ರಂಪ್ ಮತ್ತು ಬಿಡೆನ್ 2024ರ ಅಧ್ಯಕ್ಷೀಯ ರೇಸ್‌ನಲ್ಲಿ ಪಕ್ಷದ ನಾಮನಿರ್ದೇಶನಗಳನ್ನು ಪಡೆಯಲು ಸಾಕಷ್ಟು ಪ್ರತಿರೋಧ ಎದುರಿಸಿ ಗೆಲುವು ಸಾಧಿಸಿದ್ದಾರೆ.


