ವಾಷಿಂಗ್ಟನ್ : ಜಾಗತಿಕ ಆಹಾರ ಸರಪಳಿ ಕಂಪನಿಯಾದ ಮೆಕ್‌ಡೊನಾಲ್ಡ್ ಅಮೆರಿಕದಲ್ಲಿ ಪೂರೈಸಿರುವ ಆಹಾರ ವಿಷಯುಕ್ತವಾಗಿರುವುದು ಕಂಡುಬಂದಿದೆ . ಅಮೆರಿಕದಲ್ಲಿ ಈ ಕಂಪನಿಯ ಕ್ವಾರ್ಟರ್ ಪೌಂಡರ್ ಹ್ಯಾಂಬರ್ಗ್ ಸೇವಿಸಿದವ ರಲ್ಲಿ ಇ ಕೊಲಿ ಸೋಂಕು ವ್ಯಾಪಿಸಿ ಓರ್ವ ಸಾವಿಗೀಡಾಗಿದ್ದು, ಡಜನ್‌ಗಟ್ಟಲೆ ಜನರು ಅಸ್ವಸ್ಥರಾಗಿದ್ದಾರೆ.
ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಅಮೆರಿಕದ ಪಶ್ಚಿಮ ಭಾಗದ ಪ್ರಾಂತ್ಯಗಳಲ್ಲಿ ಏಕಾಏಕಿ ಈ ಸೋಂಕು ಹರಡಲಾರಂಭಿಸಿದೆ. ಕೊಲೋರಾಡೋ ಹಾಗೂ ನೆಬ್ರಸ್ಕಾ ಪ್ರಾಂತ್ಯಗಳಲ್ಲಿ ಅತಿಹೆಚ್ಚಿನ ೪೯ ಪ್ರಕರಣಗಳು ದಾಖಲಾಗಿದ್ದು ಅವರಲ್ಲಿ ಹತ್ತು ಮಂದಿ ಆಸ್ಪತ್ರೆಗೆ ಸೇರಿದ್ದಾರೆ.
ಮೆಕ್‌ಡೊನಾಲ್ಡ್ ಹ್ಯಾಂಬರ್ಗ್ ತಿಂದವರಲ್ಲಿ ಇ ಕೊಲಿ ಸೋಂಕು ಕಂಡು ಬAದಿದೆ. ಇದಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಕ್ವಾರ್ಟರ್ ಪೌಂಡರ್ ಹ್ಯಾಂಬರ್ಗ್ನಲ್ಲಿ ಬಳಸುವ ಈರುಳ್ಳಿ ಹಾಗೂ ಗೋಮಾಂಸದ ಪ್ಯಾಟಿಗಳತ್ತ ತನಿಖೆಯನ್ನು ಕೇಂದ್ರೀಕರಿಸಲಾಗಿದೆ.
ಅಮೆರಿಕದ ಸೋಂಕು ನಿಯಂತ್ರಣ ಹಾಗೂ ತಡೆ ಕೇಂದ್ರವು ಈ ಪ್ರಕರಣವನ್ನು ಪ್ರಕಟಿಸಿದ ನಂತರ ಮೆಕ್‌ಡೊನಾಲ್ಡ್ ಕಂಪನಿಯ ಷೇರುಗಳ ಮೌಲ್ಯದಲ್ಲಿ ಶೇ.೬ಕ್ಕೂ ಹೆಚ್ಚು ಕುಸಿತ ಉಂಟಾಗಿದೆ.