Tuesday, October 21, 2025
Flats for sale
Homeವಿದೇಶವಾಷಿಂಗ್ಟನ್ : ಭಾರತ-ಪಾಕಿಸಾನ ಕದನ ವಿರಾಮ ನನ್ನದೇ ಸಾಧನೆ ಎಂದು 5ನೇ ಬಾರಿ ಹೇಳಿಕೊಂಡ ಡೊನಾಲ್ಡ್...

ವಾಷಿಂಗ್ಟನ್ : ಭಾರತ-ಪಾಕಿಸಾನ ಕದನ ವಿರಾಮ ನನ್ನದೇ ಸಾಧನೆ ಎಂದು 5ನೇ ಬಾರಿ ಹೇಳಿಕೊಂಡ ಡೊನಾಲ್ಡ್ ಟ್ರಂಪ್..!

ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವೆ ಏನು ನಡೆಯುತ್ತಿತ್ತೋ ಅದು ನನಗೆ ಇಷ್ಟವಾಗಲಿಲ್ಲ. ಹೀಗಾಗಿ ಎರಡೂ ದೇಶಗಳ ಮಧ್ಯೆ ಮಧ್ಯಪ್ರವೇಶಿಸಿ ಸಂಘರ್ಷದ ಮಾರ್ಗ ತೊರೆದು ವ್ಯಾಪಾರದ ಹಾದಿ ಹಿಡಿಯುವಂತೆ ಎರಡೂ ಕಡೆಯವರ ಮನವೊಲಿಸಿದ್ದೇನೆ. ಇದು ನನ್ನಿಂದಾದ ಬಹಳ ಒಳ್ಳೆಯ ಕೆಲಸ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿಕೊಂಡಿದ್ದಾರೆ.

ತನ್ಮೂಲಕ ಎರಡೂ ದೇಶಗಳ ಮಧ್ಯೆ ಏರ್ಪಟ್ಟ ಕದನವಿರಾಮ ತಮ್ಮ ಪ್ರಯತ್ನದಿಂದಲೇ ನಡೆದಿರುವುದು ಎಂದು ಟ್ರAಪ್ ಕಳೆದ ಶನಿವಾರದಿಂದ ಐದನೇ ಬಾರಿ ಹೇಳಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ವಾಸ್ತವವಾಗಿ ಎರಡೂ ದೇಶಗಳ ಮಿಲಿಟರಿ ಮಹಾನಿರ್ದೇಶಕರು ಹಾಟ್‌ಲೈನ್ ಮೂಲಕ ಸಂಪರ್ಕಿಸಿ ಪರಸ್ಪರರ ಭೂಮಿ, ಜಲ, ವಾಯುಪ್ರದೇಶದಲ್ಲಿ ದಾಳಿ ನಡೆಸದಿರುವ ತೀರ್ಮಾನ ಕೈಗೊಂಡಿದ್ದಾರೆ. ಈ ಸಂಧಾನದಲ್ಲಿ ಮೂರನೇ ವ್ಯಕ್ತಿ ಶಾಮೀಲಾಗಿರಲಿಲ್ಲ ಎಂದು ಬಲ್ಲಮೂಲಗಳು ತಿಳಿಸಿವೆ.

ಆದರೆ,“ನಾವು ಗಹನವಾದ ಚರ್ಚೆಯಲ್ಲಿ ತೊಡಗಿ ಕದನವಿರಾಮ ಏರ್ಪಡುವಂತೆ ಮಾಡಿದ್ದೇವೆ. ಬಹಳಶ್ರಮಪಟ್ಟು ಈ ಕಾರ್ಯಸಾಧಿಸಿರುವುದರಿಂದ ಸಂತೋಷವಾಗಿದೆ” ಎಂದವರು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು, ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ತರ ಪಾತ್ರ ವಹಿಸಿರುವುದು ಹಾಗೂ ಔಷಧಗಳ ಬೆಲೆ ಕಡಿತಗೊಳ್ಳುವಂತೆ ಮಾಡಿರುವುದರಿಂದ ಇಲ್ಲಿಯವರೆಗೆ ನನಗೆ ಬಹಳ ಅದ್ಭುತ ವಾರವಾಗಿದೆ ಎಂದು ಹೇಳಿಕೊಂಡರು. ಅತ್ಯಲ್ಪ ಅವಧಿಯಲ್ಲಿ ಅಣ್ವಸ್ತç ಸಮರ ಸ್ಫೋಟಗೊಳ್ಳುವ ಸಂಭವನೀಯತೆ ಇತ್ತು ಎಂದು ನಾನು ಭಾವಿಸುವುದಿಲ್ಲ. ಎರಡೂ ದೇಶದಲ್ಲೂ ಉತ್ತಮ ನಾಯಕರಿದ್ದಾರೆ. ಅವರೆಲ್ಲರೂ ನನಗೆ ತಿಳಿದವರು. ಆದರೂ ಇದೊಂದು ಬಹಳ ಮುಖ್ಯ ಪ್ರಕ್ರಿಯೆ. ನಾವು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular