ವಾಷಿಂಗ್ಟನ್ : ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆ ರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ವಿರುದ್ಧ ಮತ್ತಷ್ಟು ಕಠಿನ ಕ್ರಮಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಭಾರತದಿಂದ ಒದಗಿಸಲಾಗುತ್ತಿರುವ ಐಟಿ ಸೇವೆಗಳಿಗೆ ಸುಂಕ ವಿಧಿಸಲು ಚಿಂತನೆ ನಡೆಸುತ್ತಿದ್ದಾರೆ ವರದಿಗಳು ತಿಳಿಸಿವೆ.ಭಾರತವು ಶೇ. 60ರಿಂದ 65ರಷ್ಟು ಐಟಿಸೇವೆಗಳನ್ನು ಅಮೆ ರಿಕಕ್ಕೆ ಒದಗಿಸುತ್ತಿದೆ. ಒಂದು ವೇಳೆ ಇದರ ಮೇಲೆ ತೆರಿಗೆ ವಿಧಿಸಿ ದರೆ ಭಾರತದ ಐಟಿ ಉದ್ಯಮಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. * ಸರಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾನವ ಸಂಪನ್ಮೂಲ ‘ಅಮೆರಿಕಕ್ಕಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇದರ ಮೇಲೆ ಈಗಾಗಲೇ ಟ್ರಂಪ್ ಹಲವು ಕ್ರಮ ಜರಗಿಸಿದ್ದಾರೆ.
ಭಾರತದ ಐಟಿ ಸೇವೆಗಳಿಗೆ ಸುಂಕ ವಿಧಿಸುವುದಕ್ಕೆ ಅಮೆರಿಕದ ತಜ್ಞರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೆರಿಕ ಬಹುತೇಕ ಕಂಪೆನಿಗಳು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆದುಕೊಳ್ಳುತ್ತಿವೆ. ಭಾರತದಿಂದ ಶೇ. 65ರಷ್ಟು ಐಟಿ ಸೇವೆ ಅಮೆರಿಕಕ್ಕೆ ರಫ್ತು ಆಗುತ್ತಿದ್ದು ಅಂದರೆ ಪ್ರತೀ ವರ್ಷ ಸುಮಾರು 13 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತಿದೆ.ಒಂದೊಮ್ಮೆ ಸುಂಕ ಹೇರಿದರೆ ಭಾರತ ಐಟಿ ಕ್ಷೇತ್ರಕ್ಕೆ ಹೊಡೆತ ಸಾಧ್ಯತೆಯ ಲೆಕ್ಕಾಚಾರ ಉಂಟಾಗಿದ್ದು ಜತೆಗೆ ಅಮೆರಿಕದ ಕಂಪೆನಿಗಳಿಗೂ ನಷ್ಟ ಹಾಗಾಗಿ ತಜ್ಞರಿಂದ ಹೆಚ್ಚಿದ ವಿರೋಧ ವ್ಯಕ್ತವಾಗಿದೆ.
ಅಲ್ಲದೆ ಅಮೆರಿಕದಲ್ಲಿ ಕೆಲಸ ಮಾಡುವವರು ಭಾರತಕ್ಕೆ ಕಳುಹಿ ಸುವ ಹಣದ ಮೇಲೂ ಹೆಚ್ಚಿನ ಸುಂಕ ವಿಧಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಐಟಿ ಸೇವೆಗಳ ಮೇಲೆ ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗಿದೆ. ಅಮೆರಿಕದ ಕಂಪೆನಿಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಭಾರತದ ಕಂಪೆನಿಗಳು, ರಿಮೋಟ್ ಕೆಲಸಗಳ ಮೇಲೂ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಭಾರತದ ಮೇಲೆ ಸುಂಕ ವಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಕ್ಕೆ ಅಲ್ಪಾವಧಿಯ ಸವಾಲುಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ, ಜೊತೆಗೆ ದೇಶದ ಮಾಹಿತಿ ತಂತ್ರಜ್ಞಾನ ಮತ್ತು ಸೇವೆಗಳ ರಫ್ತಿನ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಸುಂಕಗಳ ಹೇರಿಕೆಯು ಕಡಿಮೆ ಇನ್‌ಪುಟ್ ಸುಂಕಗಳು, ಬಲವಾದ ವ್ಯಾಪಾರ ಪ್ರವೇಶ ಮತ್ತು ವೇಗವರ್ಧಿತ ಮೂಲಸೌಕರ್ಯ ಕಾರ್ಯಗತಗೊಳಿಸುವಿಕೆಯ ಮೂಲಕ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪೂರೈಕೆ ಸರಪಳಿಯಲ್ಲಿ ಭಾರತವು ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ತಜ್ಞರು ಹೇಳಿದ್ದಾರೆ.
“ಭಾರತದ ಎಲೆಕ್ಟ್ರಾನಿಕ್ಸ್ ವಲಯವು ರಫ್ತು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಲು, ದೇಶೀಯ ಮಾರುಕಟ್ಟೆಗಳನ್ನು ಆಳಗೊಳಿಸಲು, ಭಾರತೀಯ ಬ್ರ್ಯಾಂಡ್‌ಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಬೆಲೆ-ಸೂಕ್ಷ್ಮ, ಸುಂಕ-ಬಹಿರಂಗ ರಫ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೌಲ್ಯ ಸರಪಳಿಯನ್ನು ಮೇಲಕ್ಕೆತ್ತಲು ಇದು ತುರ್ತು ಎಂದು ಒತ್ತಿಹೇಳುತ್ತದೆ” ಎಂದು ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಮತ್ತು SEMI ಇಂಡಿಯಾದ ಮುಖ್ಯಸ್ಥ ಅಶೋಕ್ ಚಂದಕ್ ತಿಳಿಸಿದ್ದಾರೆ.