ವಾಷಿಂಗ್ಟನ್ : ಚೀನಾದ ಪೋಷಕ ಕಂಪನಿ ಬೈಟ್‌ಡ್ಯಾನ್ಸ್ ಅದನ್ನು ಮಾರಾಟ ಮಾಡದಿದ್ದರೆ ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಅಮೇರಿಕಾದಲ್ಲಿ ಟಿಕ್ ಟಾಕ್ ನಿಷೇಧಿಸುವ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಇದು ಜನಪ್ರಿಯ ಕಿರು- ವಿಡಿಯೋ ಅಪ್ಲಿಕೇಶನ್ ಅನ್ನು ಕೇವಲ ಎರಡು ದಿನಗಳಲ್ಲಿ ಅದರ ಭವಿಷ್ಯ ನಿಂತಿದೆ. ಚೀನಾ ತನ್ನ ಆಪ್ ಅನ್ನು ಅಮೇರಿಕಾಕ್ಕೆ ಮಾರಬೇಕು ಇಲ್ಲದಿದ್ದರೆ ಅಮೇರಿಕಾದಲ್ಲಿ ಬಳಕೆಗೆ ಅವಕಾಶವಿಲ್ಲ ಎನ್ನುವ ತೀರ್ಪುನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
9 ನ್ಯಾಯಾಧೀಶರ ನೇತೃತ್ವದ ಪೀಠ ೯-೦ ಸರ್ವಾನುಮತದ ಆಧಾರದ ಮೇಲೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಮತ್ತು ಅದರ ೧೭೦ ದಶಲಕ್ಷ ಅಮೇರಿಕಾದ ಬಳಕೆದಾರರನ್ನು ಆನಿಶ್ಚಿತತೆಗೆ ದೂಡಿದಿದೆ. ಇದೀಗ ಟಕ್ ಟಾಕ್ ಭವಿಷ್ಯ ಆಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈಯಲ್ಲಿದೆ.
ಸೋಮವಾರ ಆಮೇರಿಕಾದ ೪೭ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿರುವ ಡೊನಾಲ್ಡ್ ಟ್ರಂಪ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲದ ಸಂಗತಿ.
ಕಾನೂನನ್ನು ಕಳೆದ ವರ್ಷ ಕಾಂಗ್ರೆಸ್‌ನಲ್ಲಿ ಆಗಾಧವಾದ ಉಭಯಪಕ್ಷೀಯ ಬಹುಮತದಿಂದ ಅAಗೀಕರಿಸಲಾಯಿತು. ಮತ್ತು ಅಧ್ಯಕ್ಷ ಜೋ ಬಿಡನ್ ಸಹಿ ಹಾಕಿದ ನಂತರ ಅಮೇರಿಕಾದಲ್ಲಿ ಟಿಕ್ ಟಾಕ್ ಸಾಮಾಜಿಕ ಜಾಲತಾಣ ಕಂಪನಿಯನ್ನು ನಿರ್ಬಂಧಿಸಲಾಗಿತ್ತು. ಟೆಕ್ ಟಾಕ್, ಬೈಟ್ ಡ್ಯಾನ್ಸ್ ಮತ್ತು ಅಪ್ಲಿಕೇಶನ್‌ನ ಕೆಲವು ಬಳಕೆದಾರರು ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸರ್ಕಾರ ಮುಕ್ತ ಭಾಷೆಣವನ್ನು ಕಡಿಮೆ ಮಾಡುವುದರ ವಿರುದ್ಧ ಆಮೇರಿಕಾ ಸಂವಿಧಾನದ ಮೊದಲ ತಿದ್ದುಪಡಿ ರಕ್ಷಣೆಯನ್ನು ಅದು ಉಲ್ಲಂಘಿಸಿಲ್ಲ ಎಂದು ವಾದಿಸಿದ್ದರು. ಅಮೇರಿಕಾದ ರಾಷ್ಟಿçÃಯ ಭದ್ರತೆಯನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ಟಿಕ್ ಟಾಕ್ ಆಪ್ ನಿಷೇದ ಮಾಡಲಾಗಿದೆ. ಟೆಕ್ ಟಾಕ್ ಸಿಇಒ ಶೌ ಝ ಚಿವ್ ವಾಷಿಂಗ್ಟನ್‌ನಲ್ಲಿ ಪ್ರತಿಕ್ರಿತಿಸಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಪದಗಹಣ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿರುವುದಾಗಿ ತಿಳಿಸಿದ್ದಾರೆ.