ವಾಷಿಂಗ್ಟನ್ : ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಮ್ಮದೇ ಆದ ರಾಜಕೀಯ ಪಕ್ಷವನ್ನು ಘೋಷಿಸಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಈ ಹೊಸ ರಾಜಕೀಯ ಪಕ್ಷದ ಹೆಸರು ಅಮೆರಿಕ ಪಾರ್ಟಿ. ಹೊಸ ಪಕ್ಷವನ್ನು ಘೋಷಿಸುವಾಗ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮೇಲೆ ಭಾರೀ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದಾರೆ.
ಈ ಹೊಸ ಪಕ್ಷವು ಅಮೆರಿಕದ ದ್ವಿಪಕ್ಷೀಯ ವ್ಯವಸ್ಥೆಗೆ ಪರ್ಯಾಯ ವೇದಿಕೆಯಾಗಲಿದೆ ಎಂದೂ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಟ್ರಂಪ್ ಮಸ್ಕ್ನನ್ನು ಅಮೆರಿಕದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು. ಹೊಸ ಪಕ್ಷದ ಘೋಷಣೆಯೊಂದಿಗೆ, ಎಲೋನ್ ಮಸ್ಕ್ ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಎಂಬ ಚರ್ಚೆಯೂ ತೀವ್ರಗೊಂಡಿದೆ.
ಅಮೆರಿಕನ್ ಸಂವಿಧಾನ ಏನು ಹೇಳುತ್ತದೆ?
ಅಮೆರಿಕದ ಸಂವಿಧಾನದ ಪ್ರಕಾರ, ಅಮೆರಿಕದಲ್ಲಿ ಜನಿಸಿದ ವ್ಯಕ್ತಿ ಮಾತ್ರ ಅಮೆರಿಕದ ಅಧ್ಯಕ್ಷರಾಗಬಹುದು. ಇದರರ್ಥ ಅಮೆರಿಕದ ಹೊರಗೆ ಜನಿಸಿದ
ಯಾವುದೇ ವ್ಯಕ್ತಿ, ಹಲವು ವರ್ಷಗಳಿಂದ ಅಮೆರಿಕದ ಪೌರತ್ವವನ್ನು ಹೊಂದಿದ್ದರೂ ಸಹ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು
ಸಾಧ್ಯವಿಲ್ಲ. ಇದು ಮಸ್ಕ್ಗೂ ಅನ್ವಯಿಸುತ್ತದೆ.
ಮಸ್ಕ್ ಏಕೆ ಅಧ್ಯಕ್ಷರಾಗಲು ಸಾಧ್ಯವಿಲ್ಲ!
ವಾಸ್ತವವಾಗಿ, ಎಲೋನ್ ಮಸ್ಕ್ ಅಮೆರಿಕದಲ್ಲಿ ಹುಟ್ಟಿಲ್ಲ. ಕೈಗಾರಿಕೋದ್ಯಮಿ ಮಸ್ಕ್ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿ, ಅಧ್ಯಯನಕ್ಕಾಗಿ ಕೆನಡಾಕ್ಕೆ ತೆರಳಿದರು. ಕೆನಡಾದಲ್ಲಿ ಅಧ್ಯಯನ ಮಾಡಿದ ನಂತರ, ಅಮೆರಿಕಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದರು. ಅಂದಿನಿAದ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಪೌರತ್ವ ಪಡೆಯಲು ವಂಚನೆ ಮಾಡಿರುವ ಕಾರಣದಿಂದ ಅವರನ್ನು ಅಮೆರಿಕ ಗಡೀಪಾರು ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಬೆದರಿಕೆ ಹಾಕಿದ್ದರು