ವಾಷಿಂಗ್ಟನ್ : ಜಗತ್ತಿಗೆಲ್ಲ ಶಾಂತಿ ಸಂದೇಶ ಬೋಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನಸುಕಿನ ವೇಳೆ ವೆನೆಜುವೆಲಾದ ಮೇಲೆ ಹಿಗ್ಗಾಮುಗ್ಗಾ ಬಾಂಬ್ ದಾಳಿ ಮಾಡಿಸಿದ್ದಾರೆ. ಆ ದೇಶದ ಅಧ್ಯಕ್ಷನ ಮನೆಯ ಬೆಡ್ರೂಮಿಗೇ ಅಮೆರಿಕ ಸೇನೆ ನುಗ್ಗಿಸಿ ಪ್ರೆಸಿಡೆಂಟ್ ನಿಕೋಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ರಹಸ್ಯ ಸ್ಥಳಕ್ಕೆ ಅಪಹರಿಸಿದ್ದಾರೆ. ಈ ಬಗ್ಗೆ ಖುದ್ದು ಟ್ರಂಪ್ ಘೋಷಿಸಿದ್ದು, `ವೆನೆಜುವೆಲಾದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣವಾಗುವವರೆಗೂ ತಾವೇ ಆ ದೇಶವನ್ನು ನಡೆಸುವುದಾಗಿ ಹೇಳಿದ್ದಾರೆ.
ವೆನೆಜುವೆಲಾದ ಮೇಲೆ ನಡೆದ ಈ ಇಡೀ ದಾಳಿಯನ್ನು ಹಾಗೂ ಅಧ್ಯಕ್ಷ ಮುಡುರೊ ಅವರನ್ನು ಹೊತ್ತುಕೊಂಡು ಬಂದಿದ್ದನ್ನು ಟ್ರAಪ್ ವೈಟ್ಹೌಸ್ನಿಂದ ಲೈವ್ ನೋಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಾಕ್ಷಿ ಕೊಡಿ: ತಮ್ಮ ಅಧ್ಯಕ್ಷ ಹಾಗೂ ಅವರ ಪತ್ನಿ ಜೀವಂತ ಇರುವ ಬಗ್ಗೆ ಪುರಾವೆ ಒದಗಿಸಿ ಎಂದು ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಮಡುರೊ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ನಿಗೂಢ ಸ್ಥಳದಲ್ಲಿ ಇಟ್ಟಿರುವ ಫೋಟೋವನ್ನು ಬಿಡುಗಡೆ ಮಾಡಿದರು.
ದಾಳಿಯ ಹಿನ್ನೆಲೆ : ವೆನೆಜುವೆಲಾದಿಂದ ಅಮೆರಿಕಕ್ಕೆ ಮಾದಕದ್ರವ್ಯ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಪ. ಈ ದೇಶದ ಅಧ್ಯಕ್ಷ ನಿಕೋಲಸ್ ಮಾದಕ ದ್ರವ್ಯ ಕಳ್ಳಸಾಗಾಟ ಜಾಲದ ಮುಖ್ಯಸ್ಥನೆಂದೇ ಟ್ರಂಪ್ ಜರೆಯುತ್ತಿದ್ದಾರೆ. ಆದರೆ ವೆನೆಜುವೆಲಾವು ಜಗತ್ತಿನಲ್ಲೇ ಅತಿ ದೊಡ್ಡದಾದ ತೈಲ ನಿಕ್ಷೇಪ ಹೊಂದಿರುವುದು ಅಮೆರಿಕ ಅಧ್ಯಕ್ಷರ ಕೆಂಗಣ್ಣಿಗೆ ಕಾರಣವಾಗಿ
ಹೊತ್ತಿ ಉರಿದ ರಾಜಧಾನಿ ರಾಜಧಾನಿ ಕ್ಯಾರಕಸ್ ಮಾತ್ರವಲ್ಲದೇ ಮಿರಾಂಡಾ, ಅರಾಗುವಾ ಮತ್ತು ಲಾ ಗುಯಿರಾ ರಾಜ್ಯಗಳಲ್ಲಿಯೂ ಅಮೆರಿಕ ದಾಳಿ ನಡೆಸಿದೆ. ಕ್ಯಾರಕಸ್ ನಗರದಲ್ಲಿ ಬಾಂಬ್ ದಾಳಿ ನಂತರ ಹಲವಾರು ಕಟ್ಟಡಗಳು ಹೊತ್ತಿ ಉರಿದವು. ಆದರೆ ಈ ಮಿಲಿಟರಿ ಆಕ್ರಮಣವನ್ನು ತಿರಸ್ಕರಿಸಿರುವ ವೆನೆಜುವೆಲಾ ಸರ್ಕಾರ, ದೇಶದಲ್ಲಿ ಈಗ ರಾಷ್ಟಿçÃಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.


