ವಾಷಿಂಗ್ಟನ್ : ಇರಾನ್ ವಿರುದ್ಧ ದಾಳಿ ಮಾಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಜೊತೆಗೆ ಐರೋಪ್ಯ ದೇಶಗಳು ಜೊತೆಗೂಡಿದರೆ ಆ ದೇಶಗಳ ಮೇಲೂ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜೊತೆಗೂಡಿ ದಾಳಿ ಮಾಡುವ ಮೊದಲು ಅಮೆರಿಕದೊಂದಿಗೆ ಸದ್ಭಾವನೆಯಿAದ ಮಾತುಕತೆ ನಡೆಸುತ್ತಿದ್ದೆವು. ಆದರೂ ಇರಾನ್ ವಿರುದ್ಧ ಎರಡೂ ದೇಶಗಳು ಮುಗಿಬಿದ್ದ ನಂತರ ನಾವು ಅಮೆರಿಕನ್ನರನ್ನು ನಂಬುವುದಿಲ್ಲ. ನಮಗಷ್ಟೇ ಅಲ್ಲದೆ, ರಾಜತಾಂತ್ರಿಕತೆಗೂ ಅಮೆರಿಕನ್ನರು ದ್ರೋಹ ಬಗೆದಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಇರಾನ್‌ನ ರಾಯಭಾರಿ ಮಜೀದ್ ತಖ್ತ್-ರಾವಂಚಿ ದೂಷಿಸಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ಮಿತ್ರಕೂಟವು ಇರಾನಿನ ಶಾಲೆಗಳು, ವೈದ್ಯಕೀಯ , ಮನರಂಜನಾ ಮತ್ತು ಕ್ರೀಡಾ ಸೌಲಭ್ಯಗಳೂ ಸೇರಿದಂತೆ ಹೆಚ್ಚು ಜನರಿರುವ ನಾಗರಿಕ ಪ್ರದೇಶಗಳು ಮತ್ತು ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ವಿವೇಚನಾರಹಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ಈ ಕೃತ್ಯಗಳು ಸ್ಪಷ್ಟವಾದ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ ಎಂದೂ ದೂಷಿಸಿದ್ದಾರೆ.
6 ವಾರಗಳಿಗೆ ಯುದ್ಧ ವಿಸ್ತಾರ ಸಾಧ್ಯತೆ: ಏತನ್ಮಧ್ಯೆ, ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯು ನಾಲ್ಕರಿಂದ ಆರು ವಾರಗಳವರೆಗೆ ತೆಗೆದುಕೊಳ್ಳಬಹುದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲಿವಿಟ್ ಹೇಳಿದ್ದಾರೆ. ಇರಾನಿನ ವಾಯುಪ್ರದೇಶವನ್ನು ನಿಯಂತ್ರಿಸುವತ್ತ ಅಮೆರಿಕ ಸಾಗುತ್ತಿದೆ ಎಂದೂ ಹೇಳಿದರು. ಶ್ವೇತಭವನದಲ್ಲಿ ಅಮೆರಿಕದ ಪ್ರಮುಖ ಶಸ್ತ್ರಾಸ್ತ್ರ ತಯಾರಕರನ್ನು ಭೇಟಿಯಾದ ಟ್ರಂಪ್, ಅತ್ಯುತ್ತಮ ಶ್ರೇಣಿಯ ಶಸ್ತಾçಸ್ತçಗಳ ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚಿಸುವಲ್ಲಿ ಶಸ್ತಾçಸ್ತç ತಯಾರಕರ ಮನವೊಲಿಸಿದ ಬೆನ್ನಲ್ಲೇ ಲಿವಿಟ್ ಹೇಳಿಕೆ ಹೊರಬಿದ್ದಿದೆ.
ಪೆಜೆಶ್ಕಿಯಾನ್ ಜತೆ ಪುಟಿನ್ ಮಾತುಕತೆ: ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇಬ್ಬರೂ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ್ದಾರೆ. ಜೊತೆಗೆ ಈ ರೀತಿ ದೂರವಾಣಿ ಸಂಪರ್ಕ ಮುಂದುವರಿಸುವುದಕ್ಕೂ ಇಬ್ಬರೂ ಒಪ್ಪಿದ್ದಾರೆ ಎಂದು ರಷ್ಯಾ ಸರ್ಕಾರ ತಿಳಿಸಿದೆ.
80 ಜೆಟ್‌ಗಳಿಂದ ಇರಾನ್ ಮಿಲಿಟರಿ ರ‍್ಪೋರ್ಟ್ ಮೇಲೆ ಇಸ್ರೇಲ್ ದಾಳಿ ಟೆಹ್ರಾನ್: ಇರಾನ್ ವಿರುದ್ಧ ಸತತ ೮ನೇ ದಿನವೂ ಇಸ್ರೇಲ್ ದಾಳಿ ಮುಂದುವರಿಸಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಮಿಲಿಟರಿ ಕಟ್ಟಡಗಳು ಹಾಗೂ ಮೆಹರ್‌ಬಾದ್ ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಮೇಲೆ 80 ಯುದ್ಧ ವಿಮಾನಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇರಾನ್ ಐಆರ್‌ಜಿಸಿ ಇಮಾಮ್ ಹುಸ್ಸೇನಿ ಮಿಲಿಟರಿ ವಿಶ್ವವಿದ್ಯಾಲಯ, ಬ್ಯಾಲಿಸ್ಟಿಕ್ ಕ್ಷಿಪಣಿ ಸಂಗ್ರಹಣಾ ವ್ಯವಸ್ಥೆ, ಮತ್ತು ಕ್ಷಿಪಣಿ ಡ್ರೋನ್ ಸಂಗ್ರಹಕ್ಕೆ ನಿರ್ಮಿಸಲಾಗಿದ್ದ ಅಂಡರ್‌ಗ್ರೌAಡ್ ಸAಗ್ರಹಾಗಾರದ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿದೆ. ಇತ್ತ ಹಿಬ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮುಂದುವರಿಸಿದೆ.


