ವಾಷಿಂಗ್ಟನ್ : ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕವು ಶನಿವಾರ ದಾಳಿ ನಡೆಸಿದ್ದು, ಅಧಿಕೃತವಾಗಿ ಯುದ್ಧದ ಅಖಾಡಕ್ಕೆ ಅಮೆರಿಕ ಧುಮುಕಿದಂತಾಗಿದೆ. ಅತ್ಯAತ ಬಲವಾದ ಆರು ಬಂಕರ್ ಬಸ್ಟರ್ ಹಾಗೂ ಸಬ್‌ಮೆರಿನ್‌ಗಳಿಂದ ಸಿಡಿಸುವ 30 ಟೊಮೊಹಾಕ್ ಕ್ಷಿಪಣಿಗಳ ಮೂಲಕ ಅಮೆರಿಕ ಇರಾನ್‌ಗೆ ಆಘಾತ ನೀಡಿದೆ.
ದಾಳಿ ನಡೆಸಿದ ಎಲ್ಲಾ ವಿಮಾನಗಳು ಈಗ ಸುರಕ್ಷಿತವಾಗಿ ಅಮೆರಿಕಕ್ಕೆ ಮರಳಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಹೇಳಿದ್ದಾರೆ. ಇದಾದ ಬಳಿಕ ರಾಷ್ಟçವನ್ನು ಉದ್ದೇಶಿಸಿ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, `ಇರಾನ್ ಅಣು ಕೇಂದ್ರಗಳನ್ನು ನಾಶಪಡಿಸಲಾಗಿದೆ. ಇರಾನ್ ಪ್ರತಿರೋಧ ಒಡ್ಡಿದರೆ ಮತ್ತಷ್ಟು ದಾಳಿ ನಡೆಸುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಇರಾನ್ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಿ ಜಗತ್ತನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತು ಎಂದು ಅವರು ಹೇಳಿದ್ದಾರೆ.
ಮೋದಿಗೆ ಇರಾನ್ ಅಧ್ಯಕ್ಷ ಕರೆ, ಶಾಂತಿಗೆ ಪ್ರಧಾನಿ ಸಲಹೆ ಅಮೆರಿಕ ದಾಳಿ ಮಾಡಿದ ಕೆಲವೇ ಗಂಟೆಗಳೊಳಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಕರೆ ಮಾಡಿ ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ವಿವರ ನೀಡಿದ್ದಾರೆ. ಭಾರತವನ್ನು ಮಿತ್ರ ದೇಶವೆಂದು ಪರಿಗಣಿಸಿರುವ ಮಸೌದ್ ಅವರು, ಪ್ರಾದೇಶಿಕ ಶಾಂತಿ, ಸ್ಥಿರತೆ ಹಾಗೂ ಭದ್ರತೆಗೆ ಉತ್ತೇಜಿಸುವಲ್ಲಿ ಪ್ರಮುಖ ಪಾಲುದಾರ ದೇಶವೆಂದೂ ಬಣ್ಣಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ರಾಜತಾಂತ್ರಿಕ ಮಾತುಕತೆಯ ಮಾರ್ಗ ಹಿಡಿಯಬೇಕೆಂಬ ಭಾರತದ ನಿಲುವಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಧ್ಯಪ್ರಾಚ್ಯದ ಸದ್ಯದ ಪರಿಸ್ಥಿತಿ ಕುರಿತು ಮಸೌದ್ ಜೊತೆ ಚರ್ಚಿಸಿದ್ದಾರೆ. ಪರ್ವತ ಪ್ರದೇಶಗಳಲ್ಲಿ ನಿರ್ಮಾಣಗೊಂಡಿದ್ದು, ಯಾವುದೇ ದಾಳಿಗೆ ಸುಲಭವಾಗಿ ಬಗ್ಗದ ಫರ್ಡೋ ಪರಮಾಣು ಕೇಂದ್ರದ ಮೇಲೆ ಭಾನುವಾರ ಅಮೆರಿಕ ದಾಳಿ ನಡೆಸಿತು.
60 ಮೀಟರ್ ಆಳ ಕೊರೆದು ಸಿಡಿವ ಶಕ್ತಿಶಾಲಿ ಬಾಂಬ್ ಫರ್ಡೋ ಪರಮಾಣು ಕೇಂದ್ರದ ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿಯಾದ ಬಂಕರ್ ಡೆಸ್ಟಾçಯರ್‌ಗಳನ್ನು ಸಿಡಿಸಿದೆ. ಇದು 13,೦೦೦ ಕೆ.ಜಿ ಸ್ಫೋಟಕವಾಗಿದ್ದು, ಬಿ-೨ ರಹಸ್ಯ ವಿಮಾನಗಳ ಮೂಲಕ ಈ ಬಾಂಬ್‌ಗಳನ್ನು 12 ಕಿ.ಮೀ. ಮೇಲಿನಿಂದ ಉದುರಿಸಲಾಯಿತು. ಅಷ್ಟು ಎತ್ತರದಿಂದ ಬೀಳುವ ಬಾಂಬ್ 60 ಮೀಟರ್ ಆಳಕ್ಕೆ ಮೊದಲು ಕೊರೆದುಕೊಂಡು ಹೋಗುತ್ತದೆ. ಅತ್ಯಂತ ಗಟ್ಟಿಯಾದ ಬಂಕರ್‌ಗಳಿದ್ದರೂ ಒಳಗೆ ನುಗ್ಗಿಕೊಂಡು ಹೋಗಿಸ್ಫೋಟಗೊಳ್ಳುತ್ತದೆ. ಫರ್ಡೋ ಪರ್ವತ ಪ್ರದೇಶದಲ್ಲಿ ಭೂಗತವಾಗಿ ನಿರ್ಮಿಸಿರುವ ಘಟಕಕ್ಕೆ ಇದು ಹಾನಿಯುಂಟು ಮಾಡಿದೆ ಎಂದು ಅಮೆರಿಕ ಹೇಳಿಕೊಂಡಿದೆ.