Wednesday, November 5, 2025
Flats for sale
Homeವಿದೇಶವಾಷಿಂಗ್ಟನ್ : ಅಮೆರಿಕದಲ್ಲಿ ಆಂಧ್ರ ಮೂಲದ ವಿದ್ಯಾರ್ಥಿ ಯನ್ನು ಇರಿದು ಹತ್ಯೆ.

ವಾಷಿಂಗ್ಟನ್ : ಅಮೆರಿಕದಲ್ಲಿ ಆಂಧ್ರ ಮೂಲದ ವಿದ್ಯಾರ್ಥಿ ಯನ್ನು ಇರಿದು ಹತ್ಯೆ.

ವಾಷಿಂಗ್ಟನ್ : ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದಲ್ಲಿ ಇರಿದು ಕೊಲ್ಲಲಾಗಿದೆ.೨೦೨೪ರಲ್ಲಿ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ನಡೆದ ಇಂತಹ ದಾಳಿಯ ಒಂಬತ್ತನೇ ಘಟನೆ ಇದಾಗಿದೆ.

ಗುಂಟೂರಿನ ಬರ‍್ರಿಪಾಲೆಂನ ಪರುಚೂರಿ ಅಭಿಜಿತ್ ಎಂಬ ೨೦ ವರ್ಷದ ವಿದ್ಯಾರ್ಥಿಯನ್ನು ಯಾರೋ ದುಷ್ಕರ್ಮಿಗಳು ಕೊಂದಿದ್ದಾರೆ. ಆತನ ಶವ ಅಮೆರಿಕಾದ ಕಾಡೊಂದರೊಳಗೆ ಕಾರಿನಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಭಿಜಿತ್ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ದುಷ್ಕರ್ಮಿಗಳನ್ನುಇನ್ನೂ ಗುರುತಿಸಲಾಗಿಲ್ಲ. ಬೋಸ್ಟನ್ ವಿವಿಯ ಕ್ಯಾಂಪಸ್‌ನ ಅರಣ್ಯದಲ್ಲಿ ಆತನ ಶವ ಪತ್ತೆಯಾಗಿದೆ. ಹಣ ಮತ್ತು ಲ್ಯಾಪ್‌ಟಾಪ್‌ಗಾಗಿ ಸುಲಿಗೆಕೋರರು ಅಭಿಜಿತ್‌ನನ್ನು ಕೊಂದಿರಬಹುದುಎಂದು ಶಂಕಿಸಲಾಗಿದೆ.

ವಿಶ್ವವಿದ್ಯಾನಿಲಯದಲ್ಲಿ ನಡೆದ ಕೊಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಭಿಜಿತ್ ಇತರ ವಿದ್ಯಾರ್ಥಿಗಳೊಂದಿಗೆ ಹೊಂದಿರಬಹುದಾದ ವೈಷಮ್ಯದ ಕುರಿತು ಕೂಡ ತನಿಖೆ ನಡೆಯುವ
ಸಾಧ್ಯತೆಯಿದೆ.

ಅಭಿಜಿತ್ ಅವರು ತಮ್ಮ ಹೆತ್ತವರಾದ ಪರುಚೂರಿ ಚಕ್ರಧರ್ ಮತ್ತು ಶ್ರೀಲಕ್ಷ್ಮಿಯ ಏಕೈಕ ಪುತ್ರರಾಗಿದ್ದರು. ಅಭಿಜಿತ್ ಬಾಲ್ಯದಿಂದಲೂ ಉಜ್ವಲ ವಿದ್ಯಾರ್ಥಿಯಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆರಂಭದಲ್ಲಿ ಅಭಿಜಿತ್‌ನ ತಾಯಿ ವಿದೇಶದಲ್ಲಿ ಓದುವ ಆತನ ನಿರ್ಧಾರವನ್ನು ವಿರೋಧಿಸಿದ್ದರು. ಅಭಿಜಿತ್‌ನ ಉತ್ತಮ ಭವಿಷ್ಯಕ್ಕಾಗಿ ಬಯಸಿ ಮನಸ್ಸು ಬದಲಾಯಿಸಿದ್ದರು.

ಪರುಚೂರಿ ಅಭಿಜಿತ್‌ನ ತಂದೆ- ತಾಯಿ ತಮ್ಮ ಮಗ ಕೊಲೆಯಾದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅಭಿಜಿತ್ ಅವರ ಪಾರ್ಥಿವ ಶರೀರ ಶುಕ್ರವಾರ ಸಂಜೆ ಗುಂಟೂರಿನ ಬರ‍್ರಿಪಾಲೆನಲ್ಲಿರುವ ಅವರ ಮನೆಗೆ ತಲುಪಿದೆ. ಅಲ್ಲದೆ, ಅಮೆರಿಕದಲ್ಲಿ ನಿರಂತರ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ, ಹತ್ಯೆಗಳ ಸರಣಿಗೆ ಇದು ಇನ್ನೊಂದು ಸೇರ್ಪಡೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular