ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಚೌಕ್‌ನಲ್ಲಿರುವ ಪುರಾತನ ಆತ್ಮವಿಶ್ವೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ೭ ಜನರು ಸುಟ್ಟು ಕರಕಲಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ದೇವಾಲಯದಲ್ಲಿ ಅಲಂಕಾರದ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಇದು ಹತ್ತಿರದ ಜನರನ್ನು ಆವರಿಸಿದೆ. ಅದರಲ್ಲಿ ಏಳು ಜನರು ಸಜೀವ ದಹನ ಗೊಂಡಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಮಹಮೂರ್‌ಗಂಜ್‌ನಲ್ಲಿರುವ ಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. ಬ್ರಹ್ಮನಲ್ ಚೌಕಿ ಅಡಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಹರಿಯಾಲಿ ಶೃಂಗಾರ್ ಮತ್ತು ಆರತಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಬೆAಕಿಯಿAದಾಗಿ ದೇವಾಲಯದ ಪ್ರಧಾನ ಅರ್ಚಕ ಸೇರಿದಂತೆ ಒಟ್ಟು 7 ಜನರು ಸುಟ್ಟು ಕರಕಲಾಗಿದ್ದಾರೆ. ಈ ಘಟನೆಯಲ್ಲಿ, ದೇವಾಲಯದ ಪ್ರಧಾನ ಅರ್ಚಕ ಸೇರಿದಂತೆ 7 ಜನರು ಗರ್ಭಗುಡಿಯಲ್ಲಿಯೇ ಸುಟ್ಟು ಕರಕಲಾದರು. ಎಲ್ಲಾ ಗಾಯಾಳುಗಳನು ಕಬೀರ್ ಚೌರಾದಲ್ಲಿರುವ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಬ್ಬ ವ್ಯಕ್ತಿಗೆ 65% ಸುಟ್ಟ ಗಾಯಗಳಾಗಿದ್ದು,
ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ.