ವಯನಾಡು ; ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆಯೊಂದು ವಯನಾಡಿನಲ್ಲಿ ದಾಳಿ ನಡೆಸಿದ್ದು ಮನೆಯಂಗಳದಲ್ಲಿದ್ದ ವ್ಯಕ್ತಿಯನ್ನು ಕೊಂದು ಹಾಕಿದೆ.
ವಯನಾಡಿನ ಮನಂದವಾಡಿ ಪಡಮಲದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಟಾಕ್ಸಿ ಡ್ರೈವರ್ ಆಗಿ ದುಡಿಯುತ್ತಿದ್ದ ಅಜಿ(52) ಎಂದು ಗುರುತಿಸಲಾಗಿದೆ. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಯೂ ಮನೆ ಕಾಪೌಂಡ್ ದ್ವಂಸಗೊಳಿಸಿ ಒಳಬಂದು ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಮನೆಯಂಗಳದಲ್ಲಿ ನಿಂತಿದ್ದ ಸೇರಿದಂತೆ ಇತರ ಕುಟುಂಬಸ್ಥರು ಪಾರಾಗಿದ್ದಾರೆ.
ಸಿಸಿ ಕ್ಯಾಮರದಲ್ಲಿ ಪತ್ತೆಯಾದ ಪ್ರಕಾರ ಕಾಡಾನೆ ವ್ಯಕ್ತಿಯನ್ನು ಅಡ್ಡಾಡಿಸಿ ದಾಳಿ ನಡೆಸಿದೆ,ಇಲ್ಲಿ ಇರುವ ಜನರು ಚೆಲ್ಲಾಪಿಲ್ಲಿಯಾದ ದೃಶ್ಯ ಕೂಡ ಸೆರೆಯಾಗಿದೆ. ಆದರೆ ಇವರುಗಳು ಕಾಡಾನೆಯನ್ನು ಹಾಟ್ಟಾಡಿಸುವ ಸಮಯದಲ್ಲಿ ಈ ಘಟನೆ ನಡೆದಿರಬಹುದೆಂಬುದು ತಜ್ಜರ ಮಾತು.


