ಲಿಂಗಸುಗೂರು : ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ರೈತರ ಆಕ್ರೋಶ.ಪಂಪಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಲಿಂಗಸುಗೂರಿನ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮಾವಿನಭಾವಿ,ಭೂಪುರ, ರಾಂಪುರ, ಹುನಕುಂಟಿ ಕಳ್ಳಿಲಿಂಗಸುಗೂರು ಗ್ರಾಮಗಳಲ್ಲಿ ಈ ಹಿಂದೆ ಹಗಲು ಹೊತ್ತಲ್ಲಿ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು ಆದರೆ ಏಕಾಏಕಿಯಾಗಿ ರಾತ್ರಿವೇಳೆ ಕೇವಲ ಐದು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ರೈತರು ರಾತ್ರಿ ವೇಳೆ ಜಮೀನಿಗೆ ಹೋಗಲು ಹೇಗೆ ಸಾಧ್ಯ, ಕ್ರೀಮಿಕೀಟಗಳ ಹಾವಳಿಯಿಂದ ರೈತರಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಕೂಡಲೇ ಮೊದಲಿನಂತೆ ಹಗಲು ಹೊತ್ತಲ್ಲಿ ೩ಫೇಸ್ ವಿದ್ಯುತ್ ಏಳು ಗಂಟೆಗಳ ಕಾಲ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗ್ರಾಮಸ್ಥರಾದ ಹನುಮಪ್ಪ, ಶಿವಶರಣಪ್ಪ, ಈರಪ್ಪ, ನಿರುಪಾದಿ, ಕಲ್ಲಪ್ಪ, ಶರಣಪ್ಪ, ಹುಲಗಯ್ಯ, ಸಂಗನಗೌಡ, ರಾಯಪ್ಪ, ಅಮರಪ್ಪ, ಮುಕ್ಕಣ್ಣ, ಚಂದಪ್ಪ, ಮಲ್ಲಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


