ಲಖನೌ : ಮುಸ್ಲಿಮಳೊಬ್ಬಳನ್ನು ಸೊಸೆಯಾಗಿ ಸ್ವೀಕರಿಸಲು ಒಪ್ಪದ ಹೆತ್ತವರನ್ನು ಮಗನೇ ಕೊಂದು ಶವಗಳನ್ನು ತುಂಡುಗಳಾಗಿ ಕತ್ತರಿಸಿ ನದಿಗೆಸೆದಿರುವ ಭಯಾನಕ ಘಟನೆ ಉತ್ತರಪ್ರದೇಶದ ಔನ್‌ಪುರದಲ್ಲಿ ನಡೆದಿದೆ.
ಅಂಬೇಶ ಎಂಬಾತನೇ 62 ವರ್ಷದ ಶ್ಯಾಮ್ ಬಹಾದ್ದೂರ್ ಹಾಗೂ 60 ವರ್ಷದ ಬಬಿತಾ ಎನ್ನುವ ಹೆತ್ತವರನ್ನು ಕೊಂದ ಪಾಪಿ. ಅಂಬೇಶನಿಗೆ ಇಬ್ಬರು ಮಕ್ಕಳಾದ ನಂತರವೂ ಹೆತ್ತವರು ಆತನ ಸಂಸಾರವನ್ನು ಮನೆಯೊಳಗೆ ಸೇರಿಸಿಕೊಳಲಿಲ್ಲ. ಈ ಬಗ್ಗೆ ಆಗಾಗ ಮಗನ ಜೊತೆ ಜಗಳ ಮಾಡುತ್ತಿದ್ದ ಹೆತ್ತವರು, ಸೊಸೆಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಆಕೆ 5 ಲಕ್ಷ ರೂ ಜೀವನಾಂಶಕ್ಕೆ ಪಟ್ಟು ಹಿಡಿದಳು. ಅಷ್ಟು ಹಣ ಆತನಲ್ಲಿಲ್ಲದಿರುವ ಕಾರಣ ಹೆತ್ತವರನ್ನೇ ಕೊಂದು ಹಾಕಿದ.


