ರಿಪ್ಪನ್ಪೇಟೆ;- ಸಮೀಪದ ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಯನಿರ್ವಾಹಕ ಆಧಿಕಾರಿಯಿಂದ ಲಕ್ಷಾಂತರ ರೂಪಾಯಿಗಳ ಆವ್ಯವಹಾರವನ್ನು ನಡೆಸಿರುವ ಶಂಕೆಯಿAದಾಗಿ ಕಳೆದ ಎರಡು ಮೂರು ತಿಂಗಳಿAದ ಕಛೇರಿಗೆ ಹಾಜರಾಗದೇ ನಾಪತ್ತೆಯಾಗಿದ್ದು ಅಡಳಿತ ಮಂಡಳಿಯವರು ಸಾಗರ ಸಹಕಾರ ಸಂಘಗಳ ಸಹಾಯಕ ನಿಂಬAಧಕರಿಗೆ ಮತ್ತು ಡಿ.ಆರ್.ಇವರಿಗೆ ದೂರು ನೀಡಿದ ಮೇರೆಗೆ ಶಿವಮೊಗ್ಗ ಜಿಲ್ಲಾ ಡಿ.ಆರ್.ಅದೇಶದಂತೆ ಇಂದು ಅಡಳಿತ ಮಂಡಳಿಯವರ ಸಮ್ಮುಖದಲ್ಲಿ ಲಾಕರ್ಗಳ ಬೀಗ ಒಡೆದು ಪರಿಶೀಲನೆ ನಡೆಸಲಾದ ಘಟನೆ ಬುಧವಾರ ನಡೆದಿದೆ.
ಕಳೆದ ಸೆಪ್ಟಂಬರ್ –ಆಕ್ಟೋಬರ್ ತಿಂಗಳಿAದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಕೃಷ್ಣ ನಾಯ್ಕ್ ಎಂಬುವರು ಸಹಕಾರ ಸಂಘಕ್ಕೆ ಆನಧಿಕೃತವಾಗಿ ಗೈರು ಹಾಜರಾಗಿದ್ದು ಇದರಿಂದಾಗಿ ಸಂಘದ ಷೇರುದಾರ ಸದಸ್ಯರುಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿ ನಮ್ಮ ಸಂಘದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಗುಸು ಗುಸು ಸುದ್ದಿ ಹರಡುತ್ತಿದ್ದಂತೆ ಸಂಘದ ಅಡಳಿತ ಮಂಡಳಿಯವರು ಸಂಘದ ಕಾರ್ಯದರ್ಶಿಯವರ ಸಂಪರ್ಕಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗಿ ವಿಫಲವಾದರೂ ನಂತರ ಷೇರುದಾರರಿಗೆ ಉತ್ತರಿಸಲಾಗದೇ ಕೊನೆಗೆ ಬೇರೆ ದಾರಿಕಾಣದೇ ಸಂಬAಧಿಸಿದ ಸಾಗರ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಸಹಕಾರ ಸಂಘಗಳ ಡಿ.ಆರ್.ಇವರಿಗೆ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದರ ಮೇರೆಗೆ ಡಿ.ಆರ್.ರವರು ಪೊಲೀಸ್ ಇಲಾಖೆಯವರ ಸಹಾಯದೊಂದಿಗೆ ಸಹಕಾರ ಸಂಘದ ಲಾಕರ್ನಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವಂತೆ ಆದೇಶಿಸಿದ ಅದೇಶದಂತೆ ಇಂದು ಸಹಕಾರ ಸಂಘದ ಕ್ಷೇತ್ರಾಧಿಕಾರಿ ವೆಂಕಟಚಲಪತಿಯವರ ನೇತೃತ್ವದಲ್ಲಿ ಇಂದು ಅಡಳಿತ ಮಮಡಳಿಯವರ ಸಮ್ಮುಖದಲ್ಲಿ ಲಾಕರ್ ಒಡೆದು ಪರಿಶೀಲನೆ ನಡೆಸಿದರು.
ಅವ್ಯವಹಾರದ ಮೊತ್ತದ ಬಗ್ಗೆ ಲೆಕ್ಕಪರಿಶೀಲನಾ ವರದಿಯನ್ನಾದರಿಸಿ ಬಹಿರಂಗ ಪಡಿಸಲಾಗುವುದೆಂದು ಮಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯದುವೀರ,ಉಪಾಧ್ಯಕ್ಷ ಕಟ್ಟೆ ಹೆಚ್.ಆರ್.ರಾಘವೇಂದ್ರ,ಸೇರಿದAತೆ ಸಂಘದ ಸರ್ವಸದಸ್ಯರು ಹಾಜರಿದ್ದರು.
(ಅಡಳಿತ ಮಂಡಳಿಯವರ ಬೇಜವಾಬ್ದಾರಿಯೇ ಇದಕ್ಕೆ ಕಾರಣ;-ಕಳೆದ ಮೂರು ನಾಲ್ಕು ವರ್ಷಗಳಿಂದ ಇಲ್ಲಿನ ಸಹಕಾರ ಸಂಘದ ಲೆಕ್ಕ ತಪಾಸಣೆ ಮಾಡಿಸದೇ ನಿರ್ಲಕ್ಷö್ಯ ವಹಿಸಿರುವುದು ಮತ್ತು ಸುಮಾರು ೧೦ ಲಕ್ಷ ಕ್ಕೂ ಅಧಿಕ ಮೊತ್ತದ ಹಣ ಆವ್ಯವಹಾರ ವಾಗಲು ಅಡಳಿತ ಮಂಡಳಿಯವರ ನಿರ್ಲಕ್ಷö್ಯವೇ ಕಾರಣವೆಂದು ಸಹಕಾರಿ ದುರೀಣ ಸತೀಶ್ಹುಂಚ ಆರೋಪಿಸಿದರು)


