ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಬರಪೀಡಿತ ವರದಿ ಮಾತ್ರ ಅವೈಜ್ಞಾನಿಕವಾಗಿರುತ್ತದೆ. ಮಲೆನಾಡಿನ ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಬರದಿದ್ದು, ಇದರಿಂದ ರೈತರು ತಮ್ಮ ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿದ್ದು ಸರ್ಕಾರ ನೆಪಕ್ಕೆ ಮಾತ್ರ ಅಧಿಕಾರಿಗಳಿಂದ ವರದಿ ತರಿಸಿ ಶಿವಮೊಗ್ಗ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆಂದು ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಆರ್.ಎ.ಚಾಬುಸಾಬ್ ಆರೋಪಸಿದರು.
ರಿಪ್ಪನ್‌ಪೇಟೆ ಪಟ್ಟಣದ ನಾಡಕಛೇರಿಯ ಮುಂಭಾಗ ರಾಜ್ಯ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ನಾಡಕಛೇರಿಯ ಉಪತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ ವಿಶೇಷವಾಗಿ ಹೊಸನಗರ ತಾಲ್ಲೂಕಿನಲ್ಲೂ ಸುಮಾರು ೧೫ ಸಾವಿರ ಹೆಕ್ಟೇರ್ ಭತ್ತದ ಬೆಳೆ ೮೦೦ ಹೆಕ್ಟರ್ ಜೋಳದ ಬೆಳೆ ನಾಶವಾಗಿದ್ದು ಅಧಿಕಾರಿಗಳು ನೀಡಿರುವ ವರದಿ ಕೇವಲ ಅರ್ಧದಷ್ಟಿರುತ್ತದೆ. ಹೀಗೆಯೇ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಸಹ ಭತ್ತದ ಬೆಳೆ ಜೋಳದ ಬೆಳೆ ಸರ್ವನಾಶವಾಗಿದೆ. ಈ ಕೂಡಲೇ ರಾಜ್ಯಪಾಲರು ಮದ್ಯಪ್ರವೇಶಮಾಡಿ ಸರ್ಕಾರ ತರಿಸಿಕೊಂಡಿರುವ ವರದಿಯನ್ನು ತಿರಸ್ಕರಿಸಿ, ಸಮಗ್ರ ವರದಿಯನ್ನು ತರಿಸಿಕೊಂಡು ರೈತರಿಗೆ ಪರಿಹಾರ ನೀಡುವಲ್ಲಿ ಮದ್ಯಪ್ರವೇಶ ಮಾಡಲು ಆಗ್ರ ಹಿಸಿದರು .
ಜೆಡಿಎಸ್ ಜಿಲ್ಲಾ ಮುಖಂಡ ಆರ್ ಎನ್.ಮಂಜುನಾಥ್ ಮಾತನಾಡಿ ಜಿಲ್ಲೆಯಾದ್ಯಂತ ರೈತರು ಭಿತ್ತಿದ ಭತ್ತದ ಬೀಜ, ಜೋಳ, ಸಕಾಲಕ್ಕೆ ಮಳೆ ಬಾರದಿದ್ದರಿಂದ ನೆಲಕಚ್ಚಿ ಹೋಗಿರುತ್ತದೆ. ಜಾನುವಾರುಗಳಿಗೆ ಮೇವಿನ ಕೊರತೆ ಸಹ ಇದೆ. ಕುಡಿಯುವ ನೀರಿನ ಬವಣೆ ಜಾಸ್ತಿ ಆಗಿದೆ.ಈಗಾಗಲೇ ಹೊಸನಗರ ತಾಲ್ಲೂಕಿನಲ್ಲಿ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಹೊಸನಗರ ೫೩೪೩ ಹೆಕ್ಟೇರ್ ಭತ್ತ, ೨೬೫ ಹೆಕ್ಟೇರ್ ಜೋಳ, ತೀರ್ಥಹಳ್ಳಿಯಲ್ಲಿ ೭೧೫೬ ಹೆಕ್ಟೇರ್ ಭತ್ತ, ಸಾಗರ ೮೯೧೩ ಹೆಕ್ಟೇರ್ ಮಳೆಯಾಧಾರಿತ ಜಮೀನು, ೧೫೯೮ ಹೆಕ್ಟೇರ್ ನೀರಾವರಿ ಬೆಳೆ, ೧೭೨೩ ಹೆಕ್ಟೇರ್ ಜೋಳದ ಬೆಳೆ ಹಾಗೂ ಜಿಲ್ಲೆಯಾದ್ಯಂತ ಶೇ ೩೩% ಕ್ಕಿಂತ ಅತಿಹೆಚ್ಚು ಬರಗಾಲವಿದ್ದು, ಬೆಳೆಗಳು ಶೇಕಡವಾರು ನಾಶವಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ನಮ್ಮ ಪ್ರಶ್ನೆ ಸಮರ್ಪಕವಾಗಿ ಆಯಾ ಗ್ರಾಮಗಳ ಖುದ್ದು ಭೇಟಿನೀಡಿ ವರದಿ ತಯಾರು ಮಾಡುವ ಪ್ರಕ್ರಿಯೇ ನಡೆದಿಲ್ಲ. ಇದೊಂದು ಕಣ್ಣು ಒರೆಸುವ ತಂತ್ರವಾಗಿದೆ ಜಿಲ್ಲೆಯಾದ್ಯಂತ ಅಡಿಕೆ ಮತ್ತು ಇತರ ಸಾಂಬಾರು ಬೆಳೆಗಳು ನೀರಿಲ್ಲದೆ ಬೆಳೆ ಶೇ ೪೦ ಕ್ಕೆ ಇಳಿಕೆಯಾಗಿದೆ. ಅದರ ಪೂರ್ಣವರದಿ ನೀಡಿಲ್ಲ ಹಾಗೂ ರೈತರು ಬೆಳೆದಿರುವ ಸಾಂಬಾರು ಬೆಳೆ, ಇತರೆ ಬೆಳೆಗಳು ಬರದಲ್ಲಿ ನಾಶ ಹೊಂದಿರುತ್ತದೆ.
ಕರ್ನಾಟಕ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದು, ಈ ರಾಜ್ಯದ ಮುಖ್ಯಮಂತ್ರಿಗಳು ಬರಗಾಲ ಇದ್ದರೂ ನೃತ್ಯ ಮಾಡುವಲ್ಲಿ ಕಾಲಕಳೆಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲ್ಲಿ ರಾಜ್ಯದ ಘನವೆತ್ತ ರಾಜ್ಯಪಾಲರು ಮದ್ಯಪ್ರವೇಶಮಾಡಿ ಮಲೆನಾಡಿನ ಮುಖ್ಯಭಾಗವಾದ ಶಿವಮೊಗ್ಗ ಜಿಲ್ಲೆಯ ಸಮಗ್ರವರದಿಯನ್ನು ತರಿಸಲು ಜಂಟಿ ನೇತೃತ್ವದಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿಕೊಂಡು ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಕ್ತ ಆದೇಶ ನೀಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್,ಜಿಲ್ಲಾ ಜೆಡಿಎಸ್ ಮುಖಂಡ ದೂನ ರಾಜು,ಮಲ್ಲೇಶ್ಅಲುವಳ್ಳಿ,ಹೊಳೆಯಪ್ಪಗೌಡ,ಕುಕ್ಕಳಲೇ,ಯೋಗೇಂದ್ರ,ಆಣ್ಣಪ್ಪ,ನಾಗರಾಜ,ಮಸರೂರು,ಈಶ್ವರಪ್ಪ,ಗಣೇಶಹೊಸಮನೆ,ಮೇಲೋಜಿರಾವ್,ರೇಣುಕಪ್ಪ ನೆವಟೂರು ಇನ್ನಿತರರು ಪಾಲ್ಗೊಂಡಿದ್ದರು.


