Friday, March 13, 2026
Flats for sale
Homeರಾಜ್ಯರಿಪ್ಪನ್‌ಪೇಟೆ ; ಮಹಾಮಾರಿ ಡೆಂಗ್ಯೂ ಗೆ ರಿಪ್ಪನ್‌ಪೇಟೆಯ ಯುವಕ ಬಲಿ

ರಿಪ್ಪನ್‌ಪೇಟೆ ; ಮಹಾಮಾರಿ ಡೆಂಗ್ಯೂ ಗೆ ರಿಪ್ಪನ್‌ಪೇಟೆಯ ಯುವಕ ಬಲಿ

ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮರಣ ಮೃದಂಗ ಬಾರಿಸುತಿದ್ದು ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ.

ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಆಶಿಕ್ ರಸೂಲ್ (27) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಶನಿವಾರದಿಂದ ಜ್ವರದಿಂದ ಬಳಲುತಿದ್ದ ಆಶಿಕ್ ರಸೂಲ್ ಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಮೃತಪಟ್ಟಿದ್ದಾನೆ.

ಹೊಸನಗರ ರಸ್ತೆಯ ರಾಯಲ್ ಕಂಫರ್ಟ್ ಲಾಡ್ಜ್ ಮುಂಭಾಗದಲ್ಲಿ ಬದ್ರಿಯಾ ಮೊಬೈಲ್ ಸೆಂಟರ್ ನಡೆಸುತಿದ್ದ ಆಶಿಕ್ ರಸೂಲ್ ಜ್ವರದ ಲಕ್ಷಣ ಕಾಣಿಸಿಕೊಂಡು ಕೇವಲ ಮೂರೇ ದಿನಗಳ ಅಂತರದಲ್ಲಿ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ಹಿನ್ನಲೆಯಲ್ಲಿ ಇಂದು ಸಂಜೆ ಮೃತಪಟ್ಟಿದ್ದಾನೆ.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಒಂದೇ ವಾರದ ಅಂತರದಲ್ಲಿ ಡೆಂಗ್ಯೂ ಜ್ವರ ಇಬ್ಬರನ್ನು ಬಲಿ ಪಡೆದಿದೆ, ಇತ್ತೀಚೆಗೆ ರಶ್ಮಿ ನಾಯಕ್ ಎಂಬವವರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular