Saturday, March 14, 2026
Flats for sale
Homeರಾಜ್ಯರಿಪ್ಪನ್‌ಪೇಟೆ : ಅಟ ಮತ್ತು ಪಾಠ ಜೀವನ ಸಾರ್ಥಕತೆಗೆ ರಹದಾರಿ’’:ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ.

ರಿಪ್ಪನ್‌ಪೇಟೆ : ಅಟ ಮತ್ತು ಪಾಠ ಜೀವನ ಸಾರ್ಥಕತೆಗೆ ರಹದಾರಿ’’:ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ.

ರಿಪ್ಪನ್‌ಪೇಟೆ ; ಆಟ ಮತ್ತು ಪಾಠ ಜೀವನದ ಸಾರ್ಥಕತೆಗೆ ರಹದಾರಿ. ಜ್ಞಾನ ಮತ್ತು ಕ್ರಿಯೆ ಗಳ ಸಂಗಮವೇ ಕ್ರೀಡೆ.ಸೋಲು ಗೆಲುವು ಮುಖ್ಯವಾಗದೇ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯಎಂದು ಆನಂದಪುರದ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಎಸ್.ಜೆ.ಜಿ.ವಿದ್ಯಾಪೀಠ, ಬೆಕ್ಕಿನಕಲ್ಮಠ ಸಮೂಹ ಸಂಪನ್ಮೂಲ ಕೇಂದ್ರ ಶ್ರೀಬಸವೇಶ್ವರ ಕನ್ನಡ ಮತ್ತು ಅಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಕ್ರೀಡೆಯು ಸಹ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸಿ ಸೋಲು ಗೆಲುವಿನ ಪಾಠವನ್ನು ಸಹ ಕಲಿಯಬಹುದು ಎಂದರು.

ಕ್ರೀಡಾ ದ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ ನೆರವೇರಿಸಿದರು. ಕ್ಷೇತ್ರ ಶೀಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಕ್ರೀಡಾ ಕೂಟದ ಸಮಾರಂಭವನ್ನು ಉದ್ಘಾಟಿಸಿದರು. ಕ್ರೀಡಾ ಜ್ಯೋತಿಯನ್ನು ಬಾಳೂರು ಗ್ರಾಮ ಪಂಚಾಯ್ತಿ ಆಧ್ಯಕ್ಷ ಬಿ.ಶ್ರೀನಿವಾಸ ಅಚಾರ್ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಬಸವೇಶ್ವರ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಆಧ್ಯಕ್ಷ ಉಮೇಶ್ ಕುಂಬ್ಳೆ ವಹಿಸಿದ್ದರು. ಹೊಸನಗರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಲಚಂದ್ರ ರಾವ್, ಪಿ,ಎಸ್, ಐ, ಪ್ರವೀಣ್ ಎಸ್.ಪಿ ಗ್ರಾ.ಪಂ.ಉಪಾಧ್ಯಕ್ಷ ಸುಧೀದ್ರ ಪೂಜಾರಿ,ಎಲ್.ವೈ.ದಾನೇಶಪ್ಪ ,ಆಶ್ವಿನಿ,ದೀಪಾಸುದೀರ್,ಎನ್. ಚಂದ್ರೇಶ್.ಜಗದೀಶಕಾಗಿನಲ್ಲಿ, ಎಸ್.ಪಿ.ನಾಗರಾಜ್,ರಂಗ ನಾಥ ಇನ್ನಿತರರು ಪಾಲ್ಗೊಂಡಿದ್ದರು. ಸಿಆರ್.ಪಿ.ಮಂಜುನಾಥ್ ಸ್ವಾಗತಿಸಿದರು.ಚಂದ್ರಪ್ಪ ನಿರೂಪಿಸಿದರು. ಗುರುಕಿರಣ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular