ರಾಯಚೂರು : ಪ್ರಕೃತಿ ವಿಕೋಪದಿಂದ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಜನಸಾಮನ್ಯರು ಮನೆಯಿಂದ ಹೊರಬರಲು ಭಯಬೀತರಾಗುವ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ.ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದು ಜಸ್ಟ್ ಸ್ಯಾಂಪಲ್ ಇನ್ನೂ ತಾಪಮಾನ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ.
ಮೇ ೫ ರ ವರೆಗೆ ಉಷ್ಣ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಆಫೀಸ್‌ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಜನರು ಈಗಾಗಲೇ ಬಿಸಿಲಿನ ಶಾಖದಿಂದ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಗೆ ಬರಲು ಆಗದಷ್ಟು ತಾಪಮಾನ ಹೆಚ್ಚಿದೆ.
ಇದೀಗ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಯುವಕರು ಹೊಸ ಪ್ರಯೋಗ ಮಾಡಲು ಇಳಿದಿದ್ದು ಬೆಂಕಿ ಇಲ್ಲದೆ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ತಿಂದಿದ್ದಾರೆ.ಬಿಸಿಲಿನಿಂದಲೇ ಮೊಟ್ಟೆಯ ಆಮ್ಲೆಟ್ ಮಾಡಿದ್ದಾರೆ.ರಾಯಚೂರು ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿ ದಿನ 44 ರಿಂದ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದ್ದು ಬಿಸಿಲು ಅದ್ಯಾವ ಪರಿ ಇದೆ ಎಂಬ ಕುತೂಹಲಕ್ಕಾಗಿ ಬೆಂಕಿ ಇಲ್ಲದೆ ಬಿಸಿಲಿನಲ್ಲಿ ಒಂದೂವರೆ ಗಂಟೆವರೆಗೆ ಕಬ್ಬಿಣದ ತವಾ ಇಟ್ಟು ಅದು ಕಾದ ನಂತರ ಮೊಟ್ಟೆ ಒಡೆದು ಆಮ್ಲೆಟ್ ತಯಾರಿಸಿ ತಿಂದಿದ್ದಾರೆ.