ರಾಯಚೂರು ; ಬಂಡೆಕಲ್ಲು ಉರುಳಿ ಬಿದ್ದು ಇಬ್ಬರು ಮಕ್ಕಳು ಸಾವನಪ್ಪಿದ್ದು ಇನ್ನೊಂದು ಮಗುವಿನ ಕಾಲು ಮುರಿತಕ್ಕೊಳಗಾದ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.
3ನೇ ತರಗತಿ ವಿದ್ಯಾರ್ಥಿಗಳಾದ ಮಂಜುನಾಥ, ವೈಶಾಲಿ ಮೃತ ದುರ್ದೈವಿಗಳು.
8 ವರ್ಷದ ಬಾಲಕ ರಘು ಎಂಬಾತನ ಕಾಲು ಮುರಿತಕ್ಕೊಳಗಾಗಿದ್ದು ಸ್ಕೂಲ್ ರಜೆ ಹಿನ್ನೆಲೆಯಲ್ಲಿ ಪೋಷಕರ ಜೊತೆಗೆ ಜಮೀನಿಗೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಕ್ಕಳ ನರಳಾಟ ಕೇಳಿಸಿಕೊಂಡು ಸ್ಥಳಕ್ಕೆ ಪೋಷಕರು ಸ್ಥಳಕ್ಕೆ ಆಗಮಿದಿದ್ದು ಸದ್ಯ ಕಲ್ಲು ಬಂಡೆ ಎತ್ತಿಹಾಕಿ ಗಾಯಗೊಂಡ ಮಗುವಿಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಪೊಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.