ರಾಯಚೂರು : ಪತಿಹೆಂಡತಿಯ ನಡುವೆ ಉಂಟಾದ ಕಲಹದಿಂದ ಪತ್ನಿ ಪತಿಯನ್ನು ನದಿಗೆ ತಳ್ಳಿದ ಘಟನೆ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂಪನಿ ಬ್ಯಾರೇಜ್ ಬಳಿ ಈ ಘಟನೆ ನಡೆದಿದೆ.
ಪತಿಯೊಂದಿಗೆ ಬೈಕ್‌ನಲ್ಲಿ ಬಂದ ಪತ್ನಿ ಅಪಾಯಕಾರಿ ಸಂಚು ರೂಪಿಸಿದ್ದಾಳೆ.ಸೇತುವೆಯ ಮೇಲೆ ಫೋಟೋ ತೆಗೆದುಕೊಳ್ಳುವಂತೆ ನಟಿಸಿದ ನಂತರ, ಸೇತುವೆಯ ತುದಿಯಲ್ಲಿ ಪತಿಯನ್ನು ನಿಲ್ಲಿಸಿ ಅಲ್ಲಿಂದ ನದಿಗೆ ತಳ್ಳಿದ್ದಾಳೆ. ನದಿಯ ಮಧ್ಯದಲ್ಲಿ ಈಜುತ್ತಾ ಹೋಗಿ ಪ್ರಾಣ ಉಳಿಸಿಕೊಂಡ ಬಂಡೆಯ ಮೇಲೆ ಕುಳಿತಿದ್ದ ಸಹಾಯಕ್ಕಾಗಿ ಕೂಗಿದ್ದಾನೆ. ಅವನ ಕಿರುಚಾಟ ಕೇಳಿ ನೆರೆಹೊರೆ ಯವರು ಬಂದು ರಕ್ಷಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ನದಿ ಯಲ್ಲಿ ಮುಳುಗಿದ್ದ ಪತಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.
ರಾಯಚೂರಿನ ಶಕ್ತಿನಗರದಲ್ಲಿ ವಾಸಿಸುವ ದಂಪತಿಗಳ ನಡುವೆ ಜಗಳ ನಡೆದಿದ್ದು, ಪತಿಯನ್ನು ಕೊಲ್ಲಲು ಯೋಜಿಸಿದ್ದ ಪತ್ನಿ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ.