ರಾಯಚೂರು : ವೃದ್ಧ ಭಿಕ್ಷುಕಿಯೊಬ್ಬರು ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ 1.83 ಲಕ್ಷ ರೂ. ದೇಣಿಗೆ ನೀಡಿದ ಅಪರೂಪದ ಘಟನೆ ರಾಯಚೂರು ತಾಲೂಕಿನ ಬಿಜನಗರ ಗ್ರಾಮದಲ್ಲಿ ನಡೆದಿದ್ದು, ಜನರನ್ನು ಅಚ್ಚರಿಗೊಳಿಸಿದೆ.
ದಾನ ಮಾಡಲು ಶ್ರೀಮಂತನಾಗಿರಬೇಕಾಗಿಲ್ಲ. ಭಿಕ್ಷುಕನಿಗೆ ಹೃದಯ ಶ್ರೀಮಂತಿಕೆ ಇದ್ದರೆ , ಅವನು ಲಕ್ಷ ಲಕ್ಷ ರೂಪಾಯಿಗಳನ್ನು ಸಹ ದೇಣಿಗೆ ನೀಡಬಹುದು. ಅದೇ ರೀತಿ, ರಂಗಮ್ಮ ಎಂಬ ೬೦ ವರ್ಷದ ಮಹಿಳೆ ಭಿಕ್ಷಾಟನೆಯಿಂದ ಬಂದ ಹಣದಿಂದ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬಂದು ಬಿಜನಗರ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ರಂಗಮ್ಮ ಬಿಕ್ಷುಕಿಯಾಗಿದ್ದಾರೆ.
ಯಾರೊಂದಿಗೂ ಮಾತನಾಡದ ಈ ವೃದ್ಧೆಯನ್ನು ಗ್ರಾಮಸ್ಥರು ಆಕಸ್ಮಿಕವಾಗಿ ಗಮನಿಸಿದ್ದಾರೆ. ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರು ಹಣವನ್ನು ಎಣಿಸಿ ಕೊಟ್ಟಿದ್ದಾರೆ. ವೃದ್ಧೆಯನ್ನು ಹಣ ಏನು ಮಾಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಅವರು ದೇವಾಲಯ ನಿರ್ಮಾಣಕ್ಕಾಗಿ ಅದನ್ನು ದಾನ ಮಾಡುವುದಾಗಿ ಹೇಳಿದ್ದಾರೆ.