ರಾಮನಗರ ; ಕನಕಪುರ ತಾಲ್ಲೂಕು ಕೋಡಿಹಳ್ಳಿ ಮುಖ್ಯ ರಸ್ತೆ ನಾರಾಯಣಪುರದ ನಂಜಪ್ಪನ ಕಟ್ಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಯುವ ಪ್ರೇಮಿಗಳು ಮೃತಪಟ್ಟ ಘಟನೆ ನಡೆದಿದೆ.
ಕೆಬ್ಬೆಹಳ್ಳಿ ಗ್ರಾಮದ ದೀಪು(25) ತಿಪ್ಪೂರು ಗ್ರಾಮದ ಶೈಲ (20) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಕನಕಪುರದಿಂದ ಪ್ರೇಯಸಿಯ ಗ್ರಾಮಕ್ಕೆ ತನ್ನ ಕಾರಿನಲ್ಲಿ ಡ್ರಾಪ್ ಮಾಡಲು ಹೊರಟಿದ್ದ ಯುವಕನ ಕಾರು ಹಾಗೂ ಕೋಡಿಹಳ್ಳಿ ಕಡೆಯಿಂದ ಶಾಲಾ ವಾಹನದಲ್ಲಿ ಮದುವೆಗೆ ಹೊರಟಿದ್ದ ಕಾರಿನ ಮಧ್ಯೆ ಅಪಘಾತ ನಡೆದಿದೆ. ಕಾರು ಮತ್ತು ಶಾಲಾ ವಾಹನಕ್ಕೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರೇಯಸಿ ಶೈಲಾ ಮೃತಪಟ್ಟಿದ್ದು ಆಸ್ಪತ್ರೆಗೆ ಸಾಗಿಸುವಾಗ ದೀಪು ಸಾವನಪ್ಪಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಸಿ ರವಿಕುಮಾರ್ ರವರ ನೇತೃತ್ವದಲ್ಲಿ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.


