ರಾಮನಗರ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ ಅಂತಿಮ ಹಂತಕ್ಕೆ ತಲುಪಿದ ಪೊಲೀಸರ ತನಿಖೆ ನಡೆಯುತ್ತಿದ್ದು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಮನೆ ಕೆಲಸದವರು, ಗನ್ ಮ್ಯಾನ್ ಗಳು, ಸೆಕ್ಯುರಿಟಿ, ಮ್ಯಾನೇಜರ್ ರಿಂದ ವಿಭಿನ್ನ ಹೇಳಿಕೆ ಹಿನ್ನೆಲೆ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗದ ಹಿನ್ನೆಲೆ ಪೊಲೀಸರು ತಮ್ಮದೇ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆಂದು ಮಾಹಿತಿ ದೊರೆತಿದೆ.
ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಕುತ್ತು ತಂದುಕೊಂಡ್ರಾ ರಿಕ್ಕಿ ರೈ.!?
ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರಿಗೆ ದಟ್ಟ ಅನುಮಾನ ಉಂಟಾಗಿದೆ. ನಿನ್ನೆ ಇಡೀ ದಿನ ರಿಕ್ಕಿ ರೈ ಗನ್ ಮ್ಯಾನ್ ಗಳ ಡ್ರಿಲ್ ಮಾಡಿದ್ದ ಪೊಲೀಸರು. ಡ್ರೈವರ್ ಗುರಿಯಾಗಿಸಿಕೊಂಡು ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ತಾವೇ ಸಂಕಷ್ಟಕ್ಕೆ ಸಿಲುಕಿದ್ರಾ ರಿಕ್ಕಿ ರೈ ಎಂಬ ಮಾಹಿತಿ ದೊರೆತಿದೆ.
ಪ್ರಕರಣ ಡೈವರ್ಟ್ ಮಾಡಲು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು.!
ಸಿಮ್ ಇಲ್ಲದ ಮೊಬೈಲ್ ಬಿಸಾಕಿ ಪ್ರಕರಣ ದಿಕ್ಕು ತಪ್ಪಿಸುವ ಯತ್ನಮಾಡಲಾಗಿದೆ ಎಂದು ತಿಳಿದಿದೆ.ನಿನ್ನೆ ಇಡೀದಿನ ರಿಕ್ಕಿ ರೈ ಮನೆ ತಲಾಶ್ ಮಾಡಿ ಗನ್ ಗಳು ಹಾಗೂ ಬುಲೆಟ್ ಗಳ ಸಂಖ್ಯೆ ಪೊಲೀಸರು ಪರಿಶೀಲಿಸಿದ್ದು ಭದ್ರತೆಗಾಗಿ ಬಳಸ್ತಿದ್ದ ಗನ್ ಗಳೆಷ್ಟು, ಎಷ್ಟು ಗನ್ ಗಳಿಗೆ ಲೈಸೆನ್ಸ್ ಇದೆ, ಎಷ್ಟು ಬುಲೆಟ್ಸ್ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವ ವೇಳೆ ಸುಳಿವು ಸಿಕ್ಕಿದೆಂದು ಉನ್ನತ ಮೂಲಗಳಿಂದ ತಿಳಿದಿದೆ.
ಫೈರ್ ಆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಹಾಗೂ ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಬಳಸುತ್ತಿದ್ದ ಗನ್ ಗೂ ಸಾಮ್ಯತೆ.!
ಈ ಹಿನ್ನೆಲೆ ಇದೊಂದು ಫೇಕ್ ಅಟ್ಯಾಕ್ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ್ರಾ ಎಂಬ ಅನುಮಾನ ಉಂಟಾಗಿದೆ ಇಂದು ಪ್ರಕರಣದ ಸತ್ಯಾನುಸತ್ಯತೆ ಹೊರಬೀಳುವ ಸಾಧ್ಯತೆವಿದ್ದು ಒಟ್ಟಿನಲ್ಲಿ ರಿಕ್ಕಿ ರೈಗೆ ಕೋಲು ಕೊಟ್ಟು ಪೆಟ್ಟು ತಿಂದಂತಹ ಅನುಭವ ವಾಗುವುದಂತೂ ನಿಜ.