ರಾಮನಗರ : ಫೇಸ್ ಬುಕ್, ಇನ್ಸ್ ಸ್ಟಾಗ್ರಾಮ್ ನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಪತ್ನಿ ಎಂದು ವೀಡಿಯೋ ವೀಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಮನಗರ ಸೆನ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್ ಎಂಬುವವರಿಂದ ದೂರು ನೀಡಿದ್ದಾರೆ. ನಾನು ಡಿ.ಕೆ.ಸುರೇಶ್ ಪತ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪವಿತ್ರ ಎಂಬ ಮಹಿಳೆ ಹಾಕ್ತಿದ್ದು ಏ.8 ರಂದು ಫೇಸ್ ಬುಕ್, ಇನ್ಸ್ ಸ್ಟಾಗ್ರಾಮ್ ನಲ್ಲಿ ವೀಡಿಯೋ ಹರಿಬಿಟ್ಟಿದ್ದರು. ಡಿ.ಕೆ.ಸುರೇಶ್ ಪೋಟೊದೊಂದಿಗೆ ತನ್ನ ಪೋಟೋಹಾಕಿ ಎಡಿಟ್ ಮಾಡಿ ಪೇಕ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದೂ ಈ ಸಂಬಂಧ ಡಿ.ಕೆ.ಸುರೇಶ್ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗ್ತಿದೆ ಎಂದು ವಕೀಲ ಪ್ರದೀಪ್ ರಿಂದ ದೂರು ನೀಡಿದ್ದಾರೆ.ಬಳಿಕ ಪೊಲೀಸರು ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.