ಚಿಕ್ಕೋಡಿ : ಎಲ್ಲಾ ಬಾಗಿಲು ಬಂದಾಗಿ ಬಿಜೆಪಿಗೆ ರಾಜ್ಯದಲ್ಲಿ ಇಂತಹ ಹೀನಾಯ ಸೋಲು ಬಂದಿರುವುದಕ್ಕೆ ದುಃಖವಿದೆ. ಒಳ ಒಪ್ಪಂದದಿAದ ಬಿಜೆಪಿಗೆ ಈ ದುಸ್ಥಿತಿ ಬಂದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಸ್ವಪಕ್ಷದವರ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಶನಿವಾರ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ತಂದೆ, ಮಗ ಕಾರಣ. ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿರುವುದಕ್ಕೆ ಬಿಜೆಪಿ ಅಧ್ಯಕ್ಷರನ್ನೇ ಕೇಳಿ ಎಂದು ಕಿಡಿಕಾರಿದರು.
ನಿನ್ನೆ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಎಲ್ಲಾ ಬಾಗಿಲು ಬಂದಾಗಿ ಒAದೇ ಬಾಗಿಲು ಇರುತ್ತೆ ಎಂದು ಹೇಳಿದ್ದರು. ಆದರೆ ಈಗ ಎಲ್ಲಾ ಬಾಗಿಲು ಬಂದಾಗಿವೆ. ಅವರ ನಾಯಕತ್ವ ಜನರು ಒಪ್ಪಿದ್ದಾರೋ ಇಲ್ಲವೋ ಅವರಿಗೆ ಗೊತ್ತು ಎಂದು ಮಾರ್ಮಿಕವಾಗಿ ನುಡಿದರು. ಹೈಕಮಾಂಡ್ ರಾಜ್ಯಕ್ಕೆ ಉಸ್ತುವಾರಿ ನೇಮಿಸುವಾಗ ಪ್ರಾಮಾಣಿಕರು, ಸಂಸ್ಕಾರ ಇದ್ದವರನ್ನು ಹಾಕಲಿ. ಈ ಹಿಂದೆ ಅರುಣಸಿಂಗ್ ಅಂತಾ ಇದ್ದವನು ಯಡಿಯೂರಪ್ಪ, ವಿಜಯೇಂದ್ರ ಸAದೇಶಕಾರಕನಾಗಿ ಕೆಲಸ ಮಾಡಿದ ಪರಿಣಾಮವೇ ಈ ಫಲಿತಾಂಶ ಎಂದು ರಾಜ್ಯ ಉಸ್ತುವಾರಿಯ ಬಗ್ಗೆ ಏಕವಚನದಲ್ಲೇ ಹರಿಹಾಯ್ದರು.
ಈ ಫಲಿತಾಂಶದ ಮೂಲಕ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದರು. ವಕ್ಫ್ ಬೋರ್ಡ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲವಾ ಎಂಬ ಪ್ರಶ್ನೆಗೆ, ವಕ್ಫ್ ಬೋರ್ಡ್ ಇವಾಗ ಆರಂಭವಾಗಿದೆ, ಇನ್ನೂ ಜನರಿಗೆ ಗೊತ್ತಾಗಬೇಕಿದೆ ಎಂದರು. ಮಹಾರಾಷ್ಟ್ರ ದಲ್ಲಿ ವಕ್ಫ್ ಬೋರ್ಡ್ ವಿಚಾರವಾಗಿಯೇ ಚುನಾವಣೆ ಮಾಡಿದ್ರು. ಉದ್ಧವ ಠಾಕ್ರೆ ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕಾರ ಮಾಡಿದ್ರು. ಉದ್ಭವ ಠಾಕ್ರೆಯನ್ನು ಮಹಾರಾಷ್ಟ್ರ ದ ಜನ ಮುಳುಗಿಸಿದ್ರು ಎಂದರು.


