ಯಾದಗಿರಿ : ರೈತರ ಜಮೀನನ್ನು ವಕ್ಫ್ ಕಬಳಿಕೆ ಹುನ್ನಾರದ ವಿರುದ್ಧ ಯಾದಗಿರಿಯಲ್ಲಿ ಶಾಸಕ ಶರಣಗೌಡ ಕಂದಕೂರ ಆಕ್ರೋಶ ಹೊರಹಾಕಿದ್ದಾರೆ.
ಬಿಜಾಪುರ ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಆಸ್ತಿ ಅಂತ ಬರ್ತಾಯಿದೆ ಆ ರೈತರಿಗೆ ಯಾರೂ ಪರಿಹಾರ ಕೊಡಬೇಕು, ಕಷ್ಟಕ್ಕೆ ಸ್ಪಂದನೆ ಮಾಡಬೇಕು ವಕ್ಫ್ ಆಸ್ತಿ ಅಂತ ಯಾಕೆ ಬಂತು ಈ ಬಗ್ಗೆ ತನಿಖೆ ಆಗಬೇಕು,ಒಬ್ಬ ಮಂತ್ರಿ ಬಂದು ಮಾಡ್ಯಾರ ಅನ್ನೊದಕ್ಕಿಂತ ಅಲ್ಲಿ ವ್ಯವಸ್ಥೆ ಹೇಗಿದೆ ನೋಡಬೇಕು ಅಧಿಕಾರಿಗಳ ಲೋಪವಾ..? ತಾಂತ್ರಿಕ ದೋಷನಾ..? ಪ್ರಭಾವಿಗಳ ಕೈವಾಡವಾ..? ವಿಚಾರಿಸಬೇಕು ಎಂದರು .
ವಕ್ಫ್ ಆಸ್ತಿ ಸಾವಿರಾರು ಎಕರೆ ಇದೆ ಅಂತ ಸರ್ಕಾರ ಹೇಳುತ್ತದೆ ವಕ್ಪ್ ದವರು ಇದ್ದ ಆಸ್ತಿ ಉಳಿಸಿಕೊಳ್ಳುವ ಕೆಲಸ ಮಾಡ್ತಾಯಿಲ್ಲ,ರೈತರ ಭೂಮಿ ವಕ್ಪ್ ಅಂತ ಸೇರಿಸುವ ಕೆಲಸ ಮಾಡುತ್ತಿದ್ದಾರೆ,ಯಾರ್ಯಾರ ಬಡಪಾಯಿಗಳ ಜಮೀನನ್ನು ಲೂಟಿಹೊಡೆಯುತ್ತಾ ಇದ್ದಾರೆ. ತುಷ್ಠೀಕರಣ ನೀತಿಯನ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಯಾರ ಅಪ್ಪನ ಆಸ್ತಿ ಅಂತ ಇವರು ವಕ್ಪ್ ಹೆಸರಲ್ಲಿ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಯಾವುದೇ ರೈತರಿಗೆ ಅನ್ಯಾಯವಾದ್ರೂ ನಾವು ಅವರ ಪರ ದ್ವನಿ ಎತ್ತುತ್ತೇವೆ,ಸದನದ ಹೊರಗೆ, ಒಳಗೆ ಹೋರಾಟ ಮಾಡ್ತೀವಿ, ಯಾದಗಿರಿಯಲ್ಲೇ ವಕ್ಪ್ ಆಸ್ತಿಯನ್ನ ಪ್ರಭಾವಿಗಳು ಲೂಟಿ ಮಾಡಿದ್ದಾರೆ ಮೊದಲು ಆ ಆಸ್ತಿಯನ್ನ ವಕ್ಪ್ ನವರು ಉಳಿಸಿಕೊಳ್ಳಲಿ. ಯಾದಗಿರಿ ಜಿಲ್ಲಾಡಳಿತ ಭವನದ ಸುತ್ತಲಿನ ವಕ್ಪ್ ಆಸ್ತಿಯನ್ನೇ ಕಬಳಿಕೆ ಮಾಡಿದ್ದಾರೆ. ಆ ಎಲ್ಲಾ ಕಾಗದ ಪತ್ರ ನಾನು ತೆಗೆಸುತ್ತಿದ್ದೇನೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ನಾನು ದ್ವನಿ ಎತ್ತುತ್ತೇನೆ ಎಂದು ಯಾದಗಿರಿಯಲ್ಲಿ ಶಾಸಕ ಶರಣಗೌಡ ಕಂದಕೂರ ಹೇಳಿಕೆ ನೀಡಿದ್ದಾರೆ.