ಯಾದಗಿರಿ : LIC ಪಾಲಿಸಿದಾರರೇ ಎಚ್ಚರ ಎಚ್ಚರ.. ಎಂಬ ಮಾತು ಕೇಳಲೇಬೇಕು ಯಾಕೆಂದರೆ ಖದೀಮರು ಪಾಲಿಸಿಯ ನಿಮ್ಮ ಹಣಕ್ಕೆ ಕನ್ನ ಹಾಕ್ತಾರೆ ಹುಷಾರ್ ಎಂದು ಮೃತನ ಹೆತ್ತವರು ಆರೋಪಿಸಿದ್ದಾರೆ.

ಮೃತ ಸಮೀತ್
ಮೃತ ಪಾಲಿಸಿದಾರನ ಹಣಕ್ಕೆ ಕನ್ನ ಹಾಕಿದ್ದು ಮೃತನ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ದೋಚಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಡೆದಿದೆ. ಶಿವನಗೌಡ ಮೋಸ ಹೋದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಶಿವನಗೌಡ
2005 ಮೇ 28 ರಂದು 16 ವರ್ಷದ ಮಗನಿಗೆ 2021 ಫೆಬ್ರುವರಿ 28 ತಾರೀಖಿಗೆ ಮುಕ್ತಾಯವಾಗುವಂತೆ ಶಿವನಗೌಡ LIC ಪಾಲಿಸಿ ಮಾಡಿಸಿದ್ದರು,ವಿಧಿಯಾಟಕ್ಕೆ ದ್ವಿತೀಯ ಪಿಯುಸಿ ಓದುತ್ತಿದ್ದ ಪಾಲಿಸಿದಾರ ಸಮೀತ್ 2017 ರಲ್ಲಿ ಮೃತಪಟ್ಟಿದ್ದಾನೆ ಪುತ್ರನ ಸಾವಿನ ನಂತರ ಮಾನಸಿಕ ಆಘಾತದಿಂದ ಎಲ್ಐಸಿ ಕಚೇರಿಯತ್ತ ಶಿವನಗೌಡ ಹೋಗಿರಲಿಲ್ಲ ಆದರೆ ಇತ್ತೀಚೆಗೆಪಾಲಿಸಿ ಬಾಂಡ್ ನ ಮೂಲ ಪ್ರತಿ ಇಟ್ಟುಕೊಂಡು ಮೃತ ಸಮಿತ್ ತಂದೆ ಎಲ್ಐಸಿ ಕಚೇರಿಯಲ್ಲಿ ವಿಚಾರಿಸಿದಾಗ ಖದೀಮರ ಅಕ್ರಮ ಬೆಳಕಿಗೆ ಬಂದಿದೆ.
ಸಮಿತ್ ಪಾಟೀಲ್ ಹೆಸರಿನಲ್ಲಿ ಶಹಾಪುರ ಎಲ್ಐಸಿ ಶಾಖೆಯಲ್ಲಿ ಇನ್ಸೂರೆನ್ಸ್ ಮಾಡಿಸಲಾಗಿತ್ತು, ಮಗನ ವಿದ್ಯಾಭ್ಯಾಸಕ್ಕಾಗಿ ತಿಂಗಳು ಹಣ ತುಂಬಿ ವಿಮೆ ಕಂಪನಿಯಲ್ಲಿ ತಂದೆ ಶಿವನಗೌಡ ಪಾಲಿಸಿ ಮಾಡಿಸಿದ್ದರು ಆದರೆ ವಿಧಿಯಾಟ ಮಗ ಮೃತಪಟ್ಟಿದ್ದಾನೆ. 1 ಲಕ್ಷ 42 ಸಾವಿರ ರೂ. ಹಣಕ್ಕೆ ಕನ್ನ ಖದೀಮರು ಹಾಕಿದ್ದಾರೆ . ಮೃತ ಪಾಲಿಸಿದಾರನ ಹೆಸರಿನಲ್ಲಿ ಎಲ್ಐಸಿ ಏಜೆಂಟರು ಮಹಾ ಮೋಸ ಮಾಡಿದರೆಂದು ಕೃಷ್ಣ ಪಟ್ಟಣ ಸಹಕಾರ ಬ್ಯಾಕ್ ಸಿಬ್ಬಂದಿ ಶಾಮಿಲಾಗಿ ಹಣ ಲಪಟಾಯಿಸಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ . ನಕಲಿ ಬ್ಯಾಂಕ್ ಅಕೌಂಟ್, ನಕಲಿ ಆಧಾರ್ ಕಾರ್ಡ್ ನಕಲಿ ಪ್ಯಾನ್ ಕಾರ್ಡ್ ಸೃಷ್ಟಿಸಿ ವಿಮೆ ಹಣ ಲಪಟಾಯಿಸಿ ಮಹಾಮೋಸ ಮಾಡಿದ್ದಾರೆ ಈ ಬಗ್ಗೆ ಎಲ್ಐಸಿ ಅಧಿಕಾರಿಗಳು ಹಾಗೂ ಕೃಷ್ಣಾ ಪಟ್ಟಣ ಸಹಕಾರಿ ಬ್ಯಾಂಕ್ ಸಿಬ್ಬಂದಿ ವರ್ಗದವರು ಶಾಮೀಲಾಗಿ ಹಣ ಎಗರಿಸುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಾಗೂ ನನ್ನ ಮಗನ ಹೆಸರಿನಲ್ಲಿ ಬರಬೇಕಿರುವ ಪಾಲಿಸಿ ಹಣ ಹಿಂತಿರುಗಿಸಬೇಕು ಎಂದು ಮೃತನ ತಂದೆ ಶಿವನಗೌಡ ಶಹಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


