ಯಾದಗಿರಿ : ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಪ್ರತಿಭಟಿಸದ್ರೆ ಮುಸ್ಲಿಂ ಯುವಕನಿಗೆ ದ್ವೇಷ ಉಂಟಾಗಿದ್ದು ಅನ್ಯ ಧರ್ಮದ ಬಗ್ಗೆ ದ್ವೇಷ ಹುಟ್ಟಿಸುವ ವಿಡಿಯೋ ಪೊಸ್ಟ್ ಮಾಡಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ದೇಶದ್ರೋಹಿ ಆರೋಪಿ ಜಾಫರ್ ಖಾನ್ ಎಂದು ತಿಳಿದುಬಂದಿದೆ.
ಮುಸ್ಲಿಂ ಯುವಕ ಜಾಫರ್ ಖಾನ್ ಇನ್ ಸ್ಟಾಗ್ರಾಂ ನಲ್ಲಿ ದ್ವೇಷದ ವಿಡಿಯೋ ಹರಿಬಿಟ್ಟಿದ್ದು ಕಲ್ಮಾ ಜೊತೆ ಪ್ರತಿಕಾರ ತೆಗೆದುಕೊಂಡ್ರೆ ಜೀವ ತೆಗೆಯಲು ಸಿದ್ಧ ಎಂದು ಹೇಳಿದ್ದಾನೆ.ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಯಾರ ಜೊತೆ ಪ್ರತಿಕಾರ ತೆಗೆದುಕೊಳ್ಳಿ ಆದರೆ, ಕಲ್ಮಾ ಜೊತೆ ಅಲ್ಲ ಎಂದು ಉದ್ಧಟತನ ಮೆರೆದಿದ್ದಾನೆ.
ಯಾದಗಿರಿ ನಗರದ ನಿವಾಸಿಯಾಗಿರುವ ಜಾಫರ್ ಖಾನ್ ತನ್ನ ದೇಶದ್ರೋಹದ ಮನಸ್ಸನ್ನು ಬಿಚ್ಚಿದ್ದು ಇದಕೊಸ್ಕರ ನಾವು ಜೀವ ಕೊಡೊಕು ರೆಡಿ, ಜೀವ ತೆಗೆಯೊಕು ರೆಡಿ ಎಂದು ದ್ವೇಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಫರ್ ಖಾನ್ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 192, 353(2) ಬಿ.ಎನ್.ಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಯಾದಗಿರಿ ನಗರ ಪೋಲಿಸರುಆರೋಪಿ ಜಾಫರ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ಮಾಹಿತಿ ದೊರೆತಿದೆ.