ಯಾದಗಿರಿ : ಪತ್ನಿ, ಅತ್ತೆ ಹಾಗೂ ಮಾವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಬಳಿ ನಡೆದ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದು ಅನ್ನಪೂರ್ಣ (25) ಕವೀತಾ (45) ಬಸವರಾಜಪ್ಪ (52) ಮೃತ ದುರ್ದೈವಿಗಳು. ಕೊಲೆ ಮಾಡಿದ ಆರೋಪಿಯನ್ನು ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಎಂದು ತಿಳಿದಿದೆ.
ಕಳೆದ ನಾಲ್ಕು ವರ್ಷದ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನ ಪ್ರೀತಿಸಿ ಮದುವೆಯಾಗಿದ್ದ ನವೀನ್ ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೆ ವಾಪಸ್ ತವರು ಮನೆಗೆ ಅನ್ನಪೂರ್ಣ ಹೋಗಿದ್ದು ಒಂದು ವರ್ಷ ತಂದೆ ತಾಯಿ ಜೊತೆಯಲ್ಲಿ ನೆಲೆಸಿದ್ದರು.
ನ್ಯಾಯ ಪಂಚಾಯತಿ ಮಾಡಿ ಮತ್ತೆ ಜೊತೆಗಿರಲು ಪತಿ ಪತ್ನಿಯನ್ನು ನಿನ್ನೆ ಕರೆದಿದ್ದು ಪಂಚಾಯಿತಿ ಮುಗಿಸಿ ಮಗಳನ್ನು ಗಂಡ ಮನೆಗೆ ಬಿಡಲು ಅನ್ನಪೂರ್ಣ ಪೋಷಕರು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ ಮಾವನನ್ನ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಪತಿ ಪತ್ನಿ ಹೋಗಿದ್ರು ಈ ವೇಳೆ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಮೂವರನ್ನು ನವೀನ್ ಕೊಲೆ ಮಾಡಿದ್ದಾನೆ ಬಳಿಕ ವಡಗೇರ ತಾಲೂಕಿನ ಜೋಳದಡಗಿ ಬಳಿ ಶವವನ್ನು ಬಿಸಾಕಿದ್ದಾನೆ . ಸದ್ಯ ಅನ್ನಪೂರ್ಣ ಶವವನ್ನ ಪೊಲೀಸರು ಪತ್ತೆಹಚ್ಚಿದ್ದು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.