ಯಾದಗಿರಿ : ಪತ್ನಿಯ ಶೀಲದ ಮೇಲೆ ಶಂಕೆಯಿಂದ ಇಬ್ಬರು ಮಕ್ಕಳನ್ನು ತಂದೆಯೇ ಕೊಂದ ಘಟನೆ ಯಾದಗಿರಿ ತಾಲೂಕಿನ ದುಗನೂರ್ ಕ್ಯಾಂಪ್ ಬಳಿ ನಡೆದಿದೆ.
ಭಾರ್ಗವ್ (5) ಹಾಗೂ ಸಾನ್ವಿ (3) ಕೊಲೆಯಾದ ಮಕ್ಕಳು.
ತಂದೆ ಶರಣಪ್ಪನಿಂದ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದೂ ಇನ್ನೊರ್ವ ಹಿರಿಯ ಮಗನ ಮೇಲು ಕೊಲೆಗೆ ಯತ್ನಿಸಿದ್ದು ಗಂಭೀರವಾಗಿ ಗಾಯಗೊಂಡ ಹೇಮಂತ (8) ಎಂಬ ಹಿರಿಯ ಮಗನನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಶರಣಪ್ಪ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,ಯಾದಗಿರಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಡಿದ್ದು ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.