ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರದ ನಗರದ ಡೊಣ್ಣಿಗೇರಾ ಬಡಾವಣೆಯಲ್ಲಿ ಪಾಪಿ ಪತಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಮರೆಮ್ಮ(35) ಕೊಲೆಯಾದ ಪತ್ನಿ ,40 ವರ್ಷದ ಸಂಗಪ್ಪ ಕೊಲೆ ಮಾಡಿದ ಪಾಪಿ ಪತಿ.
ನಿನ್ನೆ ರಾತ್ರಿ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು ಇಬ್ಬರ ಮದ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.ಕಳೆದ ಎರಡು ದಿನಗಳ ಹಿಂದೆ ತನ್ನ ಊರಾದ ಕಕ್ಕೇರಾದಿಂದ ಸುರಪುರಕ್ಕೆ ಸಂಗಪ್ಪ ಬಂದಿದ್ದು ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಒಂದು ವರ್ಷದಿಂದ ಮರೆಮ್ಮ ತವರು ಮನೆಯಲ್ಲಿದ್ದರು.
ನಿನ್ನೆ ಸುರಪುರಕ್ಕೆ ಬಂದು ಸಂಗಪ್ಪ ಕೊಲೆ ಮಾಡಿದ್ದು ಕೊಲೆ ಮಾಡಿದ ಬಳಿಕ ಸಂಗಪ್ಪ ಪೊಲೀಸರ ಮುಂದೆ ಶರಣಾಗಿದ್ದಾನೆ. ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.