ಯಾದಗಿರಿ ; ವ್ಯಾಮೋಹದ ಜೀವನ ತ್ಯಜಿಸಿ ಸಂಯಮದ (ಸನ್ಯಾಸತ್ವ) ಕಡೆ ಪಯಣ. ಬೆಳೆಸಿದ ಘಟನೆ ನಡೆದಿದೆ. ನೂರು ಕೋಟಿಯ ಒಡೆಯ ಈಗ ಜೈನ ಮುನಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ಧೋಕಾ ಜೈನ್ ದೀಕ್ಷೆ ಪಡೆದ ವ್ಯಕ್ತಿ ಎಂದು ತಿಳಿದಿದೆ.

ಪತ್ನಿ ಮಕ್ಕಳನ್ನ ಬಿಟ್ಟು ದಿಲೀಪ್ ಕುಮಾರ್ ಜೈನ ಮುನಿಯಾಗಲು ಹೊರಟಿದ್ದು ನೂರು ಕೋಟಿ ಆಸ್ತಿ ಐಷಾರಾಮಿ ಬಂಗಲೆ, ಕಾರುಗಳನ್ನು ತ್ಯಜಿಸಿದ್ದಾರೆ.
ಕಳೆದ 12 ವರ್ಷಗಳಿಂದ ದಿಲೀಪ್ ರವರು ಅಮೆರಿಕಾದಲ್ಲಿ ಔಷಧ ಉತ್ಪಾದನಾ ವ್ಯವಹಾರ ಮಾಡುತ್ತಿದ್ದು ಜೊತೆಗೆ ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದರು.58 ವರ್ಷದ ದಿಲೀಪ್ ತಾವು 14 ವರ್ಷ ಇದ್ದಾಗಲೇ ಜೈನ್ ದೀಕ್ಷೆ ಪಡೆಯಲು ಹೋಗಿದ್ದರು ಆದರೆ ಪೋಷಕರು ಒಪ್ಪದಕ್ಕೆ ವಾಪಸ್ ಬಂದಿದ್ದಾರೆಂದು ತಿಳಿದಿದೆ.ಆದರೆ ಈಗ ಬರೋಬ್ಬರಿ 44 ವರ್ಷದ ಬಳಿಕ ದೀಲಿಪ್ ರವರು ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ದಿಲೀಪ್ ರವರಿಗೆ ಮೂರು ಹೆಣ್ಣು ಮಕ್ಕಳಿದ್ದು ಇದೀಗ ಮಕ್ಕಳು, ಮದುವೆಯಾದ ಪತ್ನಿಯನ್ನ ಒಬ್ಬೊಂಟಿಯಾಗಿ ಬಿಟ್ಟ ಸನ್ಯಾಸತ್ವ ದೀಕ್ಷೆ ಪಡೆಯಲುಹೊರಟಿದ್ದಾರೆ.
ಜೈನ್ ದೀಕ್ಷೆ ಪಡೆದಿದ್ದಕ್ಕೆ ಕೊನೆದಾಗಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಬಿಳ್ಕೋಡುಗೆ ಮಾಡಿದ್ದು ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಇನ್ಮುಂದೆ ಐಷಾರಾಮಿ ಕಾರು ಬಿಟ್ಟು ನಡೆದುಕೊಂಡೆ ಓಡಾಡಬೇಕು ಕಾಲಲ್ಲಿ ಪಾದರಕ್ಷೆ ಹಾಕಿಕೊಳ್ಳುವಂತಿಲ್ಲ, ಬರಿಗಾಲಲ್ಲಿ ಊರಿಂದ ಊರಿಗೆ ನಡೆದುಕೊಂಡೆ ಹೋಗಬೇಕು ತಲೆ ಕೂದಲು ಕಿತ್ತಿಕೊಳ್ಳಬೇಕು ಬಿಳಿ ಬಟ್ಟೆ ಮಾತ್ರ ಧರಿಸಬೇಕು ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿಕೊಂಡು ಊಟ ಮಾಡಬೇಕು ಕಠಿಣ ಹಾದಿಯಲ್ಲಿ ಸಾಗಲು ಮುಂದಾಗಿರುವ ದಿಲೀಪ್ ಪತ್ನಿ ಬೇಡ ಅಂದ್ರು ನನನ್ನು ಒಬ್ಬೊಂಟಿಯಾಗಿ ಬಿಟ್ಟು ಹೊರಟಿದ್ದಾರೆಂದು ಪತ್ನಿ ಲೀಲಾಭಾಯಿ ಕಣ್ಣಿರಾಕಿದ್ದಾರೆ.