Tuesday, October 21, 2025
Flats for sale
Homeರಾಜ್ಯಯಾದಗಿರಿ : ಅಣ್ಣನಿಗೆ ಹೃದಯಾಘಾತವಾದ ವಿಷಯ ತಿಳಿದು ತಮ್ಮನೂ ಹೃದಯಾಘಾತದಿಂದ ಸಾವು,ಆಸರೆಯಾದ ಇಬ್ಬರ ಅಗಲಿಕೆಯಿಂದ ಕಂಗಲಾಗ...

ಯಾದಗಿರಿ : ಅಣ್ಣನಿಗೆ ಹೃದಯಾಘಾತವಾದ ವಿಷಯ ತಿಳಿದು ತಮ್ಮನೂ ಹೃದಯಾಘಾತದಿಂದ ಸಾವು,ಆಸರೆಯಾದ ಇಬ್ಬರ ಅಗಲಿಕೆಯಿಂದ ಕಂಗಲಾಗ ಕುಟುಂಬಸ್ಥರು…!

ಯಾದಗಿರಿ ; ಯಾದಗಿರಿಯಲ್ಲಿ ಹೃದಯಾಘಾತದ ಪ್ರಕರಣಗಳು ಇನ್ನೂ ಹೆಚ್ಚುತ್ತಿದ್ದು ಇದೀಗ ಹೃದಯಾಘಾತದಿಂದ ಅಣ್ಣ ತಮ್ಮ ಇಬ್ಬರು ಸಾವನಪ್ಪಿದ್ದು
ಸಾವಿನಲ್ಲೂ ಸಹೋದರರು ಒಂದಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಶಮಶೋದ್ದೀನ್ (42) ಹಾಗೂ ಇರ್ಫಾನ್ (38) ಮೃತ ಸಹೋದರರು.

ಮೊದಲು ಅಣ್ಣ ಶಮಶೋದ್ಧೀನ್ ಗೆ ಹೃದಯಾಘಾತವಾಗಿದ್ದು ಈ ವಿಷಯ ತಿಳಿದು ತಮ್ಮ ಇರ್ಫಾನ್ ಹೃದಯಘಾತವಾಗಿದೆ. ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಹೋದರರು ಸಾವನ್ನಪ್ಪಿದಾರೆ.

ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆಸರೆಯಾಗಿದ್ದ ಇಬ್ಬರ ಅಕಲಿಕೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular