ಮೊಳಕಾಲ್ಮುರು ; ಬೀಟ್ರೂಟ್ ಗೆ ಸರಿಯಾದ ಬೆಲೆ ಇಲ್ಲದ ಕಾರಣ ಉಡೆವು ಗ್ರಾಮದ ರೈತ ಕಂಗಲಾಗಿದ್ದಾನೆ.
ಕೋನಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಉಡೇವು ಗ್ರಾಮದ ಉಜ್ಜಿನಿ ತಿಪ್ಪೇಸ್ವಾಮಿ ಎಂಬ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ 80,000 ಖರ್ಚು ಮಾಡಿ ಉತ್ತಮ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಬೀಟ್ರೂಟ್ ಬೆಳೆದಿದ್ದಾನೆ,ಬರಗಾಲದಲ್ಲಿಯೂ ಉತ್ತಮ ಇಳುವರಿ ಕಂಡಿರುವ ರೈತನಿಗೆ ಇದೀಗ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದಾನೆ.
ಈ ಹಿಂದೆ ಒಂದು ಕೆಜಿ ಬೀಟ್ರೂಟ್ಗೆ 25 ರಿಂದ 30 ರೂಪಾಯಿ ಬೆಲೆ ಸಿಗುತ್ತಿತ್ತು ಇದರಿಂದಾಗಿ ರೈತನಿಗೆ ಲಾಭದಾಯಕ ಕೃಷಿಯಾಗಿತ್ತು,ಆದರೆ ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಕೇವಲ ನಾಲ್ಕರಿಂದ ಐದು ರೂಪಾಯಿಗೆ ಮಾರಾಟವಾಗುತ್ತಿದ್ದು ರೈತ ತೀವ್ರ ನಷ್ಟಕ್ಕಿಡಾಗಿದ್ದಾನೆ.
ನೆರೆಯ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಾರುಕಟ್ಟೆಗೆ ಬೀಟ್ರೂಟ್ ರಫ್ತು ಮಾಡಲಾಗುತ್ತಿದ್ದು,ಕೂಲಿಯ ವೆಚ್ಚ ಮತ್ತು ವಾಹನ ಸಾಗಾಣಿಕೆಯ ವೆಚ್ಚ ದುಪ್ಪಟ್ಟು ಆಗಿದೆ ಇದರಿಂದಾಗಿ ಬೀಟ್ರೂಟ್ ಬೆಳೆದಿರುವ ರೈತನು ಬೆಲೆ ಇಲ್ಲದ ಕಾರಣ ಕೈಸುಟ್ಟುಕೊಂಡಿದ್ದಾನೆ.