ಮೈಸೂರು ; ರಾಜ್ಯದಲ್ಲಿ ಎಟಿಎಂ ರಾಬರಿ ಆಯ್ತು, ಬ್ಯಾಂಕ್ ರಾಬರಿ ಆಯ್ತು ಈಗ ರೋಡ್ ರಾಬರಿ ಸರದಿ ಶುರುವಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನರಿಗೆ ಭಯಉಂಟುಮಾಡಿದೆ .
ಮೈಸೂರು ಜಿಲ್ಲೆಯಲ್ಲಿ ಹಾಗ ಹಗಲೇ ರೋಡ್ ರಾಬರಿ ನಡೆದಿದ್ದು ನಾಲ್ವರು ಮುಸುಕುದಾರಿಗಳು ಕಾರು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ. ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಘಟನೆ ನಡೆದಿದೆ .
ಎರಡು ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿಗಳು. ಇನೊವಾ ಕಾರ್ ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ದರೋಡೆಕೋರರು ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ಎಸ್ಕೇಪ್ ಆಗಿದ್ದು ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.