ಮೈಸೂರು : ಕೊಂಬಿಂಗ್ ಕಾರ್ಯಾಚರಣೆ ವೇಳೆ ವ್ಯಕ್ತಿ ಮೇಲೆ ಹುಲಿ ದಾಳಿಯಾದ ಘಟನೆ ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ. ಬಡಗಲಪುರ ಗ್ರಾಮದ ಮಹದೇವ 34 ವರ್ಷದ ರೈತ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದಾಗ ಬಾರಿ ಗಾತ್ರದ ನರಭಕ್ಷಕ ವ್ಯಾಘ್ರ ನಡೆಸಿದೆ. ರೈತನ ಬುರುಡೆ ಭಾಗವನ್ನು ಜಿಗಿದು ನರಭಕ್ಷಕ ವ್ಯಾಘ್ರ ರಕ್ತ ಹೀರಿದೆ.
ಸತತ ಎರಡು ತಿಂಗಳುಗಳಿಂದ ಬಡಗಲಪುರ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು ಬಡಗಲಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹುಲಿಯ ದೃಶ್ಯ ನೋಡಿ ಜಮೀನುಗಳೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಇಂದು ವ್ಯಾಘ್ರದ ಸೆರೆಗೆ ಎರಡು ಆನೆಗಳ ಮೂಲಕ ಕೊಂಬಿಂಗ್ ಕಾರ್ಯ ನಡೆಸಲಾಗಿದ್ದು ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಬಡಗಲಪುರ ಗ್ರಾಮದ ಅನುಮಾನ ಕಟ್ಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಂಬಿಂಗ್ ಕಾರ್ಯಾಚರಣೆಗೆ ಸಕಲ ಸಿದ್ಧತೆ ನಡೆಸುತ್ತಿದ್ದರು. ಮೃತ ರೈತ ಮಹದೇವನನ್ನು ಭಾರಿ ಗಾತ್ರದ ನರಭಕ್ಷಕ ಹುಲಿ ಕಾಡಿನತ್ತ ಎಳೆದೊಯ್ಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಚೀರಾಟ ನಡೆಸಿ ನರಭಕ್ಷಕ ಹುಲಿಯಿಂದ ಮೃತ ಮಹದೇವ ರೈತನ ದೇಹವನ್ನು ಬಿಡಿಸಲಾಗಿದೆ.
ಬಡಗಲಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಬಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು ಬಡಗಲಪುರ ಗ್ರಾಮದ ರೈತ ಮಹದೇವ ಎಂಬುವರ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.


