Friday, November 22, 2024
Flats for sale
Homeರಾಜ್ಯಮೈಸೂರು : ಸಿ ಎಂ ಸಿದ್ದರಾಮಯ್ಯ ತವರಿನ ಕೆ.ಆರ್​​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಟ್ರೆಚ್ಚರ್, ವ್ಹೀಲ್​ ಚೇರ್​...

ಮೈಸೂರು : ಸಿ ಎಂ ಸಿದ್ದರಾಮಯ್ಯ ತವರಿನ ಕೆ.ಆರ್​​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಟ್ರೆಚ್ಚರ್, ವ್ಹೀಲ್​ ಚೇರ್​ ಇಲ್ಲ ..!!

ಮೈಸೂರು : ಮೈಸೂರು ಅಂದರೆ ನೆನಪಾಗೋದು ಅರಮನೆ ಚಾಮುಂಡಿಬೆಟ್ಟ ಆದರೆ ಪ್ರಸ್ತುತ ಮೈಸೂರಿ ನಲ್ಲಿ ಇರುವ ಸರಕಾರಿ ಕಟ್ಟಡಗಳು ಮಹಾರಾಜರ ಕಾಲದಿಂದ ಬಂದ ಕೊಡುಗೆ. ಆದರೆ ಕಳೆದ ಹಲವು ಬಾರಿ ಮುಖ್ಯಮಂತ್ರಿ ಪಟ್ಟದಲ್ಲಿರುವ ಸಿ ಎಂ ಸಿದ್ದರಾಮಯ್ಯ ರವರಿಗೆ ಮೈಸೂರಿನ ಕೆಆರ್​​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಒಂದು ಒಂದು ವೀಲ್ ಚೇರ್ ನೀಡುವ ಭಾಗ್ಯಕೊಡಲಿಲ್ಲ ಎಂದು ಆಸ್ಪತ್ರೆಯಲ್ಲಿ ದಾಖಲಾದ ಮಾದೇಶ ಆಕ್ರೋಶ ಹೊರಹಾಕಿದ್ದಾರೆ. ಸರಕಾಕ್ಕೆ ಆದಾಯ ಬರುವ ಚಾಮುಂಡಿ ಬೆಟ್ಟದಲ್ಲಿ ಸರಕಾರ ಮೈಸೂರು ಅರಸರ ಅಧಿಕಾರ ಮೊಟಕು ಮಾಡಲು ಹೊರಟಿದ್ದು ಆದರೆ ಮೈಸೂರಿನ ಜನತೆಗೆ ಸರಿಯಾದ ಮೂಲಭೂತ ಸೌಕರ್ಯನೀಡಲು ವಿಫಲವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಹಲವು ವರುಷಗಳಿಂದ ಮೈಸೂರಿನಿಂದ ಸ್ಪರ್ದಿಸಿ ೨ ಬಾರಿ ಮುಖ್ಯಮಂತ್ರಿ ಹಾಗೂ ಹಲವು ಬಾರಿ ಉಪಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನ ತವರಿನಲ್ಲಿರುವ ಆಸ್ಪತ್ರೆಯಲ್ಲೇ ವ್ಹೀಲ್ ಚೇರ್ ಇಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.ಮೈಸೂರಿನ ಕೆಆರ್​​ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಇಲ್ಲದಿರುವುದು ಬೆಳಕಿಗೆ ಬಂದಿದೆ ಇರುವ ಒಂದು ವ್ಹೀಲ್​ ಚೇರ್​ಗೆ ಆಸ್ಪತ್ರೆ ಸಿಬ್ಬಂದಿ ಬೀಗ ಹಾಕಿಟ್ಟಿದ್ದರಿಂದ ವೃದ್ಧೆಯೊಬ್ಬರನ್ನು ಸಂಬಂಧಿಕರು ಪ್ಲಾಸ್ಟಿಕ್ ಚೇರ್​​ನಲ್ಲೇ ಕರೆದೊಯ್ದ ವಿಡಿಯೋ ಈಗ ವೈರಲ್ ಆಗಿದೆ.

ಸರಕಾರ ಯಾವುದೇ ಬರಲಿ ಆದರೆ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳು ಸರಿಯಾಗಿ ಸಿಗುವುದಂತೂ ಇಲ್ಲವೆಂಬುದು ಎಲ್ಲರಿಗೂ ತಿಳಿದವಿಚಾರ. ಸರಕಾರಿ ಆಸ್ಪತ್ರೆಗೆ ಯಂತೂ ಯಾರೂ ಹೋಗಲ್ಲ ಬಿಡಿ ಹೋದರೆ ಬದುಕುವ ನಂಬಿಕೆಯನ್ನು ಬಿಡಬೇಕು ಅಂತಹ ಪರಿಸ್ಥಿತಿ ಯಾಕೆಂದರೆ ಈ ಸರಕಾರೀ ಆಸ್ಪತ್ರೆಗಳು ಇಂತಹ ಪರಿಸ್ಥಿತಿ ಬರಲು ರಾಜಕಾರಣಿಗಳೇ ನೇರ ಹೊಣೆ .ಯಾಕೆಂದರೆ ರಾಜ್ಯದಲ್ಲಿ ಇರುವ ಖಾಸಗಿ ಆಸ್ಪತ್ರೆ ಕಾಲೇಜು ಎಲ್ಲ ರಾಜಕಾರಣಿಗಳಿಗೆ ಸೇರಿದ್ದು ಎಂಬುದು ನೂರಕ್ಕೆ ನೂರು ಸತ್ಯ ಅದರಿಂದ ಸರಕಾರಕ್ಕೆ ಬಡವರ ಮೇಲಂತೂ ಕಾಳಜಿ ಇಲ್ಲದಿರುವುದು ತಿಳಿದ ವಿಚಾರ.ಕಳೆದ ಬರಿ ನೀಡಿದ ೧೦೦ ಕೋಟಿ ರೂಪಾಯಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮೈಸೂರಿನ ಅತಿದೊಡ್ಡ ಆಸ್ಪತ್ರೆಯಾಗಿರುವ, ಶತಮಾನ ಪೂರೈಸಿರುವ ಪ್ರತಿಷ್ಠಿತ ಕೆಆರ್ ಸ್ಪತ್ರೆಯಲ್ಲಿ ಸಣ್ಣ ಮೂಲಸೌಕರ್ಯವೂ ಇಲ್ಲ ಈಗಾಗಲೇ ಈ ಆಸ್ಪತ್ರೆಗೆ ನೂರು ಕೋಟಿ ರೂಪಾಯಿ ಅನುದಾನ ಕೂಡ ಮಾಯಾವಾಗಿದೆ.

ವ್ಹೀಲ್​ಚೇರ್​​ಗೆ ಬೀಗ ಹಾಕಿರುವುದನ್ನು ಕಂಡು ಶಾಸಕ ಹರೀಶ್ ಗೌಡ ಕೆಂಡಾಮಂಡಲವಾಗಿದ್ದರೆ , ‘ನಿಮಗೆ ಸರ್ಕಾರದಿಂದ ಸಂಬಳ ಬರುತ್ತಿಲ್ಲವೇ? ಹೊರ ಗುತ್ತಿಗೆಯವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲವೇ? ಸುಮ್ಮನೆ ಸರ್ಕಾರದ ಮರಿಯಾದೆ ಯಾಕೆ ಕಳೆಯುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಟ್ರೆಚ್ಚರ್, ವ್ಹೀಲ್‌ಚೇರ್‌ ಸೇರಿ ಸಾಮಾಗ್ರಿಗಳಿದ್ದ ಕೊಠಡಿಗೆ ಬೀಗ ಹಾಕಿದ್ದು ಶಾಸಕರ ಸಮ್ಮುಖದಲ್ಲೇ ಸಿಬ್ಬಂದಿ ಕಲ್ಲಿನಿಂದ ಹೊಡೆದು ಬೀಗ ಮುರಿದಿದ್ದಾರೆ. ಒಟ್ಟಿನಲ್ಲಿ ನಾಲ್ಕು ಜಿಲ್ಲೆಗಳಿಗೆ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆಆರ್ ಆಸ್ಪತ್ರೆಗೇ ಇದೀಗ ಚಿಕಿತ್ಸೆ ಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular