ಮೈಸೂರು : ಆಕ್ಸಿಜನ್ ಸೌಲಭ್ಯ ಇಲ್ಲದ ಸರ್ಕಾರಿ ಆಂಬುಲೆನ್ಸ್ ನಲ್ಲಿ ಮಗು ಸಾವನಪ್ಪಿದ ಘಟನೆ ನಡೆದಿದೆ. ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸೌಲಭ್ಯ ಇಲ್ಲದೆ ನವಜಾತ ಶಿಶು ಸಾವನ್ನಪ್ಪಿದೆ. ಮಗು ಸಾವನಪ್ಪಿದ ಘಟನೆ ತಿಳಿದು ತಾಯಿಯ ಆಕ್ರಂದನ ಮಗಿಲು ಮುಟ್ಟಿದ್ದುನಂಜನಗೂಡು ನಗರದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಮತ್ತು ಕುಮಾರ್ ಎಂಬ ದಂಪತಿಯ ಮಗು ಇದಾಗಿದೆ.
ಕಳೆದ 17ನೆಯ ತಾರೀಖಿನಂದು ರತ್ನಮ್ಮ ಹೆರಿಗೆಗೆಂದು ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಹೆರಿಗೆಯಾದ ಬಳಿಕ ಮಗು ಆರೋಗ್ಯಕರವಾಗಿದ್ದು ಕ್ಷಣಾರ್ಧದಲ್ಲಿಯೇ ನೀಲಿ ಬಣ್ಣಕ್ಕೆ ತಿರುಗಿದೆ ಎಂದು ವೈದ್ಯರು ತಿಳಿಸಿದ್ದರು. ಹುಟ್ಟಿದ ಮಗು ನೀಲಿ ಬಣ್ಣಕ್ಕೆ ತಿರುಗಿದ ಪರಿಣಾಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ದಾದಿಯರು ಗಾಬರಿಯಾಗಿದ್ದು ನಂತರ ಮಗು ಸ್ಥಿತಿ ನೋಡಿ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ದರು.
ಮಗುವಿನ ಸ್ಥಿತಿಗತಿ ನೋಡಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆಯ ಸಿಬ್ಬಂದಿ ಮುಂದಾಗಿದ್ದು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ತಿಳಿದಿದ್ದು ಮೈಸೂರಿಗೆ ರವಾನಿಸಿದ್ದಾರೆ .ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಮಗು ಸಾವನ್ನಪ್ಪಿದ್ದು ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದಾರೆ.