ಮೈಸೂರು : ಈ ಬಾರಿ ಲೋಕ ಸಭಾ ಚುನಾವಣೆ ರಣರಂಗದಂತಾಗಿದೆ ಮಂಡ್ಯ, ಮೈಸೂರು ಆಡಳಿತ ಪಕ್ಷದ ಪ್ರತಿಷ್ಠಿತ ಕ್ಷೇತ್ರವಾಗಿದೆ. ಸಿ.ಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಮೈಸೂರು ಕ್ಷೇತ್ರವನ್ನು ಗೆಲ್ಲಲು ಒಂದು ರಣತಂತ್ರವನ್ನು ಮಾಡುತ್ತಿದ್ದಾರೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದೊಡ್ಡದೊಂದು ಸಂಚಲನ ಸೃಷ್ಟಿ ಮಾಡಲು ಕಾಂಗ್ರೆಸ್ ಕಾರ್ಯತಂತ್ರ ಸಿದ್ಧವಾಗುತ್ತಿದೆ. ಪ್ರತಾಪ್ ಸಿಂಹ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದರೆ, ಈಗ ಚರ್ಚೆಯ ದಿಕ್ಕು ಸ್ವಲ್ಪ ಬದಲಾಗಿ ಬಡವ ರಾಸ್ಕಲ್,ʻಬಡವರ ಮಕ್ಕಳು ಬೆಳೀಬೇಕುʼ ಖ್ಯಾತಿಯ ನಟ ಡಾಲಿ ಧನಂಜಯ ಅವರ ಹೆಸರು ಕೇಳಿಬರುತ್ತಿದೆ.
ಸಿದ್ದರಾಮಯ್ಯ ಸಿ.ಎಂ ಜತೆ ಆಪ್ತ ಒಡನಾಟ ಹೊಂದಿರುವ ಡಾಲಿ ಅವರು ಜನಪ್ರಿಯ ನಟ ಆಗಿರುವ ಕಾರಣಕ್ಕೆ ಪ್ರಚಾರ ನಿರಾಯಾಸವಾಗಿ ನಡೆಯುತ್ತದೆ. ಮತ್ತು ಗೆಲ್ಲುವುದು ಕಷ್ಟವಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.ಒಂದು ವೇಳೆ ಡಾಲಿ ಧನಂಜಯ ಅವರು ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿದರೆ ದೊಡ್ಡ ಮಟ್ಟದ ಸಂಚಲನವಂತೂ ಕ್ರಿಯೇಟ್ ಆಗಲಿದೆ ಎಂಬುದು ಕಾಂಗ್ರೆಸ್ಸಿನವರ ಅನಿಸಿಕೆ,ಇಷ್ಟೆಲ್ಲವಾದರೂ ಮತದಾರಪ್ರಭು ಯಾರಿಗೆ ಒಲವು ತೋರುತ್ತಾನೆಂಬುದು ಮುಂದೆ ಕಾದುನೋಡಬೇಕಾಗಿದೆ.