Friday, March 13, 2026
Flats for sale
Homeರಾಜಕೀಯಮೈಸೂರು : ಮೈಸೂರು ರಾಜರ ವಿರುದ್ಧ ನಾಲಗೆ ಹರಿಹಾಯ್ದ ಕಾಂಗ್ರೆಸ್ ಅಭ್ಯರ್ಥಿ,ಯದುವೀರ್ ಒಡೆಯರ್ ರಾಜ ವಂಶದ...

ಮೈಸೂರು : ಮೈಸೂರು ರಾಜರ ವಿರುದ್ಧ ನಾಲಗೆ ಹರಿಹಾಯ್ದ ಕಾಂಗ್ರೆಸ್ ಅಭ್ಯರ್ಥಿ,ಯದುವೀರ್ ಒಡೆಯರ್ ರಾಜ ವಂಶದ ಕುಡಿಯಲ್ಲ ಎಂದ ಹರಕು ಬಾಯಿಯ ಎಂ. ಲಕ್ಷ್ಮಣ.

ಮೈಸೂರು : ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನವರಿಗೆ ಹರಕು ಬಾಯಿಯೆಂದೇ ಹೆಸರುಪಡೆದ ಎಂ. ಲಕ್ಷ್ಮಣ್ ರಿಗೆ ಟಿಕೆಟ್ ನೀಡಿದ್ದು ಸಿ ಎಂ ಸಿದ್ದರಾಮಯ್ಯ ಸ್ವತಃ ತನ್ನ ಮಗನನ್ನು ಕಣದಿಂದ ಹಿಂದಕ್ಕೆ ಸರಿಸಿದ್ದಾರೆ ಯಾಕೆಂದರೆ ಮೈಸೂರು ರಾಜರ ಕೊಡುಗೆಯನ್ನು ಯಾವ ರಾಜಕಾರಣೀನೂ ತೆಗಳುವಂತಿಲ್ಲ,ಅವರ ಕೊಡುಗೆಯನ್ನು ಜನಸಾಮನ್ಯರು ಮರೆಯುವಂತಿಲ್ಲ ಇದೀಗ ಹರಕು ಬಾಯಿಯ ಲಕ್ಷ್ಮಣ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೂಲತಃ ರಾಜರ ಕುಡಿಯಲ್ಲ. ಅವರು ಕೇವಲ ಮೈಸೂರು ರಾಜರ ದತ್ತುಪುತ್ರ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.

ಮೈಸೂರು ಅರಮನೆಯಲ್ಲಿ ನವರಾತ್ರಿಯ ಅಷ್ಟು ದಿನವೂ ಖಾಸಗಿ ದರ್ಬಾರ್ ಜತೆಯಲ್ಲಿ ವಿವಿಧ ಪೂಜೆಗಳನ್ನು, ಧಾರ್ಮಿಕ ವಿಧಿ ವಿಧಾನದಂತೆ ನಡೆಸಲಾಗುತ್ತದೆ. ಇಂತಹ ಪೂಜೆಗಳ ನಡುವೆ ಶಾಪ ವಿಮೋಚನೆಗಾಗಿ ಅಲಮೇಲಮ್ಮನಿಗೂ ಪೂಜೆ ನಡೆಸುತ್ತಾ ಬಂದಿದ್ದಾರೆ.

ಹಾಗಾದರೆ ಅಲಮೇಲಮ್ಮ ಯಾರು? ಆಕೆಗೇಕೆ ಪೂಜೆ ಮಾಡುತ್ತಾರೆ? ಎಂಬ ಪ್ರಶ್ನೆಗಳು ಹೆಚ್ಚಿನವರನ್ನು ಕಾಡಬಹುದು. ಆದರೆ ಮೈಸೂರು ಭಾಗದಲ್ಲಿ ಮೈಸೂರು ಮಹಾರಾಜರು ಮತ್ತು ಅಲಮೇಲಮ್ಮನ ಬಗೆಗೆ ಗೊತ್ತೇ ಇರುತ್ತದೆ. ಹೊರಗಿನ ಹೆಚ್ಚಿನ ಜನಕ್ಕೆ ಇದು ಅರಿವಿಗೆ ಬಂದಿರುವುದಿಲ್ಲ. ಇಷ್ಟಕ್ಕೂ ಅಲಮೇಲಮ್ಮನಿಗೆ ಏಕೆ ಪೂಜೆ ನಡೆಯುತ್ತದೆ ಎಂಬುದನ್ನು ನೋಡುವುದಾದರೆ, ಅದಕ್ಕೊಂದು ಚಾರಿತ್ರಿಕ ಹಿನ್ನಲೆ ಸಿಗುತ್ತದೆ. ಅದು ಏನೆಂದರೆ…

ತಲಕಾಡಿಗೆ ಓಡಿಹೋದ ಶ್ರೀರಂಗರಾಯ
ವಿಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯನ ಪತ್ನಿಯೇ ಅಲಮೇಲಮ್ಮ. ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಅಲ್ಲಿಯೇ ಪತ್ನಿಯೊಡನೆ ವಾಸಿಸುತ್ತಿರುತ್ತಾನೆ. ಕೆಲದಿನಗಳ ನಂತರ ಶ್ರೀರಂಗರಾಯ ಮರಣ ಹೊಂದುತ್ತಾನೆ. ಆ ಸಮಯದಲ್ಲಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ತಲಕಾಡಿನಲ್ಲಿದ್ದ ಅಲಮೇಲಮ್ಮನಿಗೆ ಅವಳಲ್ಲಿದ್ದ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜಾಜ್ಞೆ ಮಾಡಲಾಗುತ್ತದೆ. ಆದರೆ ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಆಗ ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜಒಡೆಯರು ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ ಇದು ನಿಜವಾದ ಇತಿಹಾಸ.

ಶಾಪ ನೀಡಿದ ಅಲಮೇಲಮ್ಮ
ರಾಜಭಟರು ತಲಕಾಡಿನತ್ತ ಬರುತ್ತಿರುವ ವಿಷಯ ತಿಳಿದ ಅಲಮೇಲಮ್ಮ, ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರು ಅವಳ ಬೆನ್ನಟ್ಟುತ್ತಾರೆ. ಆಗ ಅವಳಿಗೆ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ ಕೋಪದಿಂದ ‘ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ’ ಎಂದು ಶಾಪ ನೀಡಿ ತನ್ನಲಿದ್ದ ಒಡವೆ ಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಶಾಪ ವಿಮೋಚನೆಗೆ ವಿಶೇಷ ಪೂಜೆ
ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ. ಈ ಘಟನೆ ನಡೆದ ಬಳಿಕ ಮಹಾರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

ಮೈಸೂರು ಮಹಾರಾಜರಿಗೆ

ಮಡಿಕೇರಿಯಲ್ಲಿ ನಡೆದ ತಮ್ಮ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, ಕಳೆದ ಐದು ವರ್ಷಗಳಲ್ಲಿ ಸಂಸದ ಪ್ರತಾಪ್ ಸಿಂಹ ಏನೂ ಸರಿಯಾಗಿ ಕೆಲಸ ಮಾಡಲಿಲ್ಲ. ಅದನ್ನು ಅವರೇ ತಮಗೆ ಟಿಕೆಟ್ ಕೈತಪ್ಪಿದಾಗ ಹೇಳಿಕೊಂಡರು. ಇನ್ನು ಲೋಕಸಭೆಯಲ್ಲಿ ತಲೆಯ ಲೆಕ್ಕಕ್ಕಾಗಿ ಯದುವೀರ್ ಅವರನ್ನು ಗೆಲ್ಲಿಸಿ ಕಳುಹಿಸಿದರೆ ಎಂತಹ ಅಭಿವೃದ್ಧಿ ಕೆಲಸಗಳು ನಡೆಯಬಹುದು ನೀವೆ ಚಿಂತಿಸಿ ಎಂದಿದ್ದರು. ಹೀಗಾಗಿಯೇ ನಾನು ಕೊಡಗು ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಎಐಸಿಸಿ 25 ಗ್ಯಾರಂಟಿಗಳ ಪ್ರಣಾಳಿಕೆಯನ್ನು ಸಿದ್ಧಗೊಳಿಸಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಮೈಸೂರು ಹಾಗೂ ಕೊಡಗು ಪಾರಂಪರಿಕ ಸ್ಥಳಗಳ ಅಭಿವೃದ್ಧಿ, ಮೈಸೂರು ಕೊಡಗು ರೈಲು ಸಂಪರ್ಕ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ವಿಮಾನ ನಿಲ್ದಾಣ, ಐಟಿ, ಬಿಟಿ ಕಂಪನಿಗಳಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಯವರಿಗೆ ಆದ್ಯತೆ, ಸಮಗ್ರ ನೀರು ಸರಬರಾಜು ವ್ಯವಸ್ಥೆ, ಪಿರಿಯಾಪಟ್ಟಣದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕೊಡಗಿನ ಪ್ರವಾಸಿ ಮಾಸ್ಟರ್ ಪ್ಲಾನ್, ಕೆರೆಗಳ ಜೀರ್ಣೋದ್ಧಾರ, ಮಡಿಕೇರಿಯಲ್ಲಿ ಟ್ರಾಮಾ ಸೆಂಟರ್, ಸೋಮವಾರಪೇಟೆಯಲ್ಲಿ ಟೆಕ್ನಾಲಜಿ ಪಾರ್ಕ್, ಮೈಸೂರಿನಲ್ಲಿ ವರ್ತುಲ ರೈಲು ಮಾರ್ಗ ಸೇರಿದಂತೆ ಎರಡು ಜಿಲ್ಲೆಗಳ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಕುರಿತು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಹೀಗಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರು ಕೊಡಗಿನ ಮತದಾರರ ಸೆಳೆಯಲು ಪ್ರತ್ಯೇಕ ಪ್ರಣಾಳಿಕೆಯನ್ನು ಮಾಡಿ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಮತದಾರರು ಎಷ್ಟರ ಮಟ್ಟಿಗೆ ಇದೆಲ್ಲವನ್ನು ಸ್ವೀಕರಿಸುತ್ತಾರೋ ಕಾದು ನೋಡಬೇಕು.ಈ ನಡುವೆ ರಾಜಕೀಯ ಲಾಭಕ್ಕಾಗಿ ನಾಯಕರು ಮೈಸೂರು ಮಹಾರಾಜರ ಇತಿಹಾಸವನ್ನು ಕೆನಕ್ಕುತ್ತಿರುವುದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular