ಮೈಸೂರು : 9 ದಿನ ಪ್ರಚಾರ ದಿನಬಿಡದೆ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಪ್ರಚಾರದ ಬರಾಟೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಸೋತರೆ ಸಿಎಂ ಕುರ್ಚಿ ಅಲುಗಾಡೋತ್ತೆ ಎಂಬ ಸಂಶಯ ವ್ಯಕ್ತವಾಗಿದೆ.
ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರಚಾರ ಭರ್ಜರಿಯಾಗಿ ನಡೀತಿದ್ರೆ, ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮತ್ತೊಂದು ಹಂತಕ್ಕೆ ತಲುಪಿದೆ. ಮೈಸೂರು-ಚಾಮರಾಜನಗರದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ 9 ದಿನ ಪ್ರಚಾರ ಮಾಡಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಇದೀಗ ಸಿಎಂ ಕುರ್ಚಿ ಭವಿಷ್ಯ ಈ ಎರಡು ಕ್ಷೇತ್ರಗಳ ಮೇಲೆ ನಿಂತಿದೆ ಎನ್ನಲಾಗ್ತಿದೆ.ಈ ಬಾರಿ ಮೋದಿ ಅಲೆಯೋ ಅಥವಾ ಸಿದ್ದರಾಮಯ್ಯ ನ ಭಾಗ್ಯನೋ ಎಂಬ ಸುದ್ದಿ ಹೊರಬೀಳುತ್ತಿದೆ.
ಮುಖ್ಯಮಂತ್ರಿಗಳು ಪ್ರತಿನಿಧಿಸುವ ವರುಣಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ಹೀಗಾಗಿ ಎರಡು ಕ್ಷೇತ್ರಗಳ ಜವಾಬ್ದಾರಿ ಸ್ವತಃ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಬಿದ್ದಿದೆ. ಹೀಗಾಗಿ ಸಿದ್ದರಾಮಯ್ಯ ಈ ಎರಡು ಕ್ಷೇತ್ರಗಳ ಉಸ್ತುವಾರಿ ಹೊತ್ತು ಸುಮ್ಮನೆ ಕೂತಿಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರಕ್ಕೆ ಇಳಿದಿದ್ದು. ಕಳೆದ 20 ದಿನಗಳಲ್ಲಿ ಸಿಎಂ 9 ದಿನಗಳ ಕಾಲ ಈ ಎರಡು ಕ್ಷೇತ್ರದಲ್ಲೇ ಪ್ರಚಾರ ಮಾಡಿದ್ದಾರೆ ಅಂದರೆ ಇಲ್ಲಿ ಕುರ್ಚಿಗಾಗಿ ೨ ಕ್ಷೇತ್ರವನ್ನು ಗೆಲ್ಲುವ ಅವಶ್ಯಕತೆ ಹೆಚ್ಚಾಗಿದ್ದು ಸಿ ಎಂ ಸಿದ್ದರಾಮಯ್ಯ ಗೆ ಮಾಡು ಇಲ್ಲವೇ ಮಡಿಯಂತಾಗಿದೆ.
ಸಿ ಎಂ ಸಿದ್ದರಾಮಯ್ಯ ರವರ ತವರು ಜಿಲ್ಲೆ ಮೈಸೂರಿನಲ್ಲಿ ಮಾರ್ಚ್ 24 ರಿಂದ 4 ದಿನಗಳ ಕಾಲ ಎರಡು ಕ್ಷೇತ್ರದಲ್ಲಿ ಸಿಎಂ ಪ್ರಚಾರ ಮಾಡಿದ್ರೆ, ಏಪ್ರಿಲ್ 01ರಿಂದ ಮತ್ತೆ 3 ದಿನಗಳ ಕಾಲ ಸಿದ್ದರಾಮಯ್ಯ ತಮ್ಮ ಸಮಯವನ್ನ ಎರಡು ದಿನಗಳ ಮೈಸೂರು ಹಾಗೂ ಚಾಮರಾಜನಗರಕ್ಕೆ ಮೀಸಲಿಟ್ಟಿದ್ರು. ಇದೀಗ ಶುಕ್ರವಾರದಿಂದ ಮತ್ತೆ ಎರಡು ದಿನಗಳ ಪ್ರಚಾರ ಶುರು ಮಾಡಿದ್ದು, ಮೈಸೂರು-ಚಾಮರಾಜನಗರಕ್ಕೆ ಸಿಎಂ ಒಟ್ಟು 9 ದಿನ ಪ್ರಚಾರ ಮಾಡಿದಂತಾಗಲಿದೆ.
ಈ ಮದ್ಯೆ ಹೆಚ್ಚೆತ್ತ ರಾಜ್ಯ ಬಿಜೆಪಿ – ಮೋದಿ ಸಮಾವೇಶವನ್ನ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಸಿದ್ಧಪಡಿಸಿದ ವೇಳಾಪಟ್ಟಿ ಪ್ರಕಾರ ಪ್ರಧಾನಿ ಮೋದಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ ಮಾಡಬೇಕಿತ್ತು.. ಆದ್ರೆ ಇದಕ್ಕಿದ್ದಂತೆ ರಾಜ್ಯ ಬಿಜೆಪಿ ಬೆಂಗಳೂರು ರೋಡ್ ಷೋ ಬದಲು ಮೈಸೂರಿನಲ್ಲಿ ಸಮಾವೇಶ ಆಯೋಜನೆ ಮಾಡಿದೆ. ಈ ಮೂಲಕ ಮೈಸೂರು, ಚಾಮರಾಜನಗರ, ಮಂಡ್ಯ ಗುರಿಯಾಗಿಸಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಕಣಕ್ಕಿಳಿದು ಜಯ ಸಾಧಿಸಿದ್ರು. ಆದ್ರೆ ಈ ಬಾರಿ ಬಿಜೆಪಿ ಹಿಂದುಳಿದ ವರ್ಗಕ್ಕೆ ಬರುವ ಯಾದವ ಸಮುದಾಯದ ಯದುವೀರ್ ಒಡೆಯರ್ಗೆ ಟಿಕೆಟ್ ನೀಡಿದೆ. ಮೈಸೂರು ರಾಜರಿಗೆ ಟಿಕೆಟ್ ಕೊಡುವುದರಿಂದ ೩ ಜಿಲ್ಲೆಯಲ್ಲಿ ಅನುಕಂಪದ ಅಲೆಯಿಂದ ಈ ಬಾರಿ ಬಿಜೆಪಿ ಪರ ಜನಸಾಮನ್ಯರು ಮತ ಹಾಕುತ್ತಾರೆಂಬುದು ರಾಜಕೀಯ ವಿಶ್ಲೇಷಕರ ಮಾತು.


