ಮೈಸೂರು ; ಜಿಲ್ಲೆಯಲ್ಲಿ ಮತ್ತೆ ಹುಲಿ ದಾಳಿ ನಡೆದಿದೆ. ಹತ್ತು ದಿನದ ಅಂತರದಲ್ಲಿ ಮೂರು ದಾಳಿ ಇದಾಗಿದ್ದು ಹುಲಿ ದಾಳಿಗೆ ಮತ್ತೊಂದು ಬಲಿಯಾಗಿದೆ.
ಸರಗೂರು ತಾಲೂಕು ಕೂಡುಗಿ ಗ್ರಾಮದಲ್ಲಿ ಘಟನೆ ನಡೆದಿದ್ದು ದೊಡ್ಡನಿಂಗಯ್ಯ ( 53) ವರ್ಷದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇಕೆ ಮೇಯಿಸುವ ವೇಳೆ ಘಟನೆ ನಡೆದಿದ್ದು ಮೂರು ಜನರು ಮೇಕೆ ಮೇಯಿಸುವ ವೇಳೆ ಹುಲಿ ದಾಳಿ ದಾಳಿಯಾಗಿದೆ.
ದೊಡ್ಡನಿಂಗಯ್ಯನನ್ನು ಹುಲಿ ಕಾಡಿಗೆ ಎಳೆದೊಯ್ಯಲು ಯತ್ನಿಸಿದ್ದಿ ಸ್ಥಳದಲ್ಲಿದ್ದ ಇಬ್ಬರಿಂದ ಕೂಗಾಟ ಚೀರಾಟದಿಂದ ಮೃತದೇಹವನ್ನು ಹುಲಿ ಬಿಟ್ಟು ಓಡಿ ಹೋಗಿದೆ.


