ಮೈಸೂರು : ಹುಲಿ ದಾಳಿಗೆ ಒಂದು ಹಸು ಬಲಿಯಾಗಿದ್ದು ಮತ್ತೊಂದು ಹಸುವಿಗೆ ಗಂಭೀರ ಗಾಯವಾದ ಘಟನೆ ಮೈಸೂರಿನ ಹೆಚ್.ಡಿ ಕೋಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದ ಬಳಿ ನಡೆದಿದೆ.
ಇಂದು ಹೊಸ ಹೊಳಲು ಗ್ರಾಮದ ಬಳಿ ಮೆಯ್ಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ. ಮೊನ್ನೆಯಷ್ಟೇ ಸರಗೂರು ತಾಲ್ಲೂಕಿನ ಮುಳ್ಳೂರು ಬಳಿ ರೈತ ರಾಜಶೇಖರ್ ಮೇಲೆ ಹುಲಿ ಬಲಿ ನಡೆಸಿದ್ದು ಮೃತಪಟ್ಟಿದ್ದರು. ಇದೀಗ ಹಸುಗಳ ಮೇಲೆ ನಡೆಸಿದ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.ಕಾಡು ಪ್ರಾಣಿಗಳಿಂದ ಜನರು ಬೆಚ್ಚಿ ಬಿದ್ದಿದ್ದು ಸ್ಥಳಕ್ಕೆ ಅರಣ್ಯಾಧಿಕಾರುಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.


