ಮೈಸೂರು : ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿದೆಯಾ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮುಡಾ 50:50 ಹಗರಣ ಪ್ರಕರಣ ಒಂದೆಡೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಯುತ್ತಿದ್ದು ಮತ್ತೊಂದೆಡೆ ಇಡಿ ಅಧಿಕಾರಿಗಳಿಂದ ಮುಡಾ ಮೇಲೆ ದಾಳಿ ನಡೆಸಿದೆ. ಮತ್ತೊಂದೆಡೆ ನಿವೃತ್ತನ್ಯಾ.ಪಿ.ಎನ್.ದೇಸಾಯಿ ಸಮಿತಿ ರಚಿಸಿ ತನಿಖೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದ್ದು
ಮೂರು ಸಂಸ್ಥೆಗಳಿಂದ ಮುಡಾ ತನಿಖೆ ಚುರುಕುಗೊಂಡಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ ಕೇಳಿ ಬಂದಿದೆ. ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದಾರೆ.
ಮೂರು ಸಂಸ್ಥೆಗಳು ಈಗಾಗಲೇ ತನಿಖೆಯನ್ನು ಚುರುಕುಗೊಳಿಸುತ್ತಿವೆ. ಲೋಕಾಯಕ್ತ ತನಿಖೆಗೆ ಕೋರ್ಟ್ ಮೂರು ತಿಂಗಳುಗಳ ಕಾಲ ಸಮಯಾವಕಾಶ ನೀಡಿದೆ. ಪ್ರಕರಣದ ತನಿಖೆಯಲ್ಲಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಎ4, ಎ3ಯನ್ನು ಕರೆಸಿ ವಿಚಾರಣೆಯನ್ನು ನಡೆಸಿದೆ. ಸೈಟ್, ಜಾಗದ ಮಹಜರು ಮುಗಿಸಿರುವ ಲೋಕಾಯುಕ್ತ ಅಧಿಕಾರಿಗಳು ಕೊನೆಯ ಹಂತದ ತಯಾರಿನ್ನು ನಡೆಸಿದ್ದಾರೆ.
ಇತ್ತ ನಿನ್ನೆಯಿಂದ ಮುಡಾದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಲು ನಿರಂತರವಾಗಿ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಧಿಕಾರಿಗಳಿಗೆ ಪ್ರಶ್ನೆಗಳ ಸುರಮಳೆಗೈದಿದ್ದಾರೆ ಇಡಿ ಅಧಿಕಾರಿಗಳು. ಹಲವು ಮಹತ್ವದ ಕಡತಗಳು ನಾಪತ್ತೆಯಾಗಿರುವ ಬಗ್ಗೆಯೂ ವರದಿ ಬಂದಿದೆ. ಇನ್ನು ಮತ್ತೊಂದು ಕಡೆ ಪಿ.ಎನ್ ದೇಸಾಯಿ ಕಮಿಟಿಯಿಂದ ಲಕ್ಷ ಕ್ಷ ಜೆರಾಕ್ಸ್ಗಳನ್ನು ತೆಗೆಯುವ ಕಾರ್ಯ ನಡೆದಿದೆ. ಈ ಮೂರು ಸಂಸ್ಥೆಗಳಲ್ಲಿ ಯಾವುದೇ ಸಂಸ್ಥೆ ವರದಿ ನೀಡಿದರೂ ಲಾಕ್ ಆಗೋದು ಪಕ್ಕಾನಾ ಅನ್ನುವ ಅನುಮಾನಗಳು ಸದ್ಯ ಮೂಡುತ್ತಿವೆ.
ಇದೀಗ ಮುಡಾ ಸೇರಿದ 20 ಗುಂಟೆ ಜಾಗವನ್ನ ಸಿಎಂ ಪತ್ನಿ ಪಾರ್ವತಿ ದಿ 29.9.2023 ರಂದು ತಮ್ಮ ಹೆಸರಿಗೆ ರಿಜಿಸ್ಟಾರ್ ಮಾಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ನಗರದ ಕೆಆರ್ ಎಸ್ ರಸ್ತೆಯಲ್ಲಿರುವ ಸ.ನಂ 454ರ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗ ಇದಾಗಿದ್ದು ಅದರಲ್ಲಿ 20 ಗುಂಟೆ ಜಾಗವನ್ನ ಸಿಎಂ ಪತ್ನಿ ಖರೀದಿ ಮಾಡಿದ್ದಾರೆಂದು ಕಡತಗಳು ದೊರೆತಿದೆ ಎಂದು ಮಾಹಿತಿ ದೊರೆತಿದೆ.20 ಗುಂಟೆ ಜಾಗಕ್ಕೆ 1 ಕೋಟಿ 85 ಲಕ್ಷ ಕೊಟ್ಟು ಸಿಎಂ ಪತ್ನಿ ಖರೀದಿಸಿದ್ದು (20 ಗುಂಟೆ) 21,771,99 ಚದರಡಿ ಜಾಗವನ್ನ ಸಿಎಂ ಪತ್ನಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 8998 ಚದರಡಿ ಜಾಗ ರಸ್ತೆ ಮತ್ತು ಪೈಪ್ ಲೈನ್ ಗೆ ಸೇರಿದ್ದ ಜಾಗವಾಗಿದ್ದು ರಸ್ತೆ ಮತ್ತು ಪೈಪ್ ಲೈನ್ ಗೆ ಸೇರಿದ್ದ ಜಾಗವನ್ನ ಸೇರಿಸಿಕೊಂಡು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆಂದು ತಿಳಿದಿದೆ.ಆರ್ ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಎಚ್ಚೆತ್ತ ಸಿಎಂ ಪತ್ನಿ ದಿ.31.8.2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ. ಮುಡಾದನ್ನ ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬಿಜೆಪಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸುತ್ತೇವೆಮ್ ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ, ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಭಾಗಿಯಾಗಿದ್ದರು.