ಮೈಸೂರು : ರಾಜ್ಯದಲ್ಲಿ ಮೂಲ ಜಮೀನಿನ ಮಾಲಕರನ್ನು ಹುಡುಕಿದರೆ ಎಲ್ಲಾ ಜಮೀನು ಅಕ್ರಮಕ್ಕೆ ಸೇರಿದ್ದು ಯಾಕೆಂದರೆ ಯಾವುದೇ ಸರಕಾರ ಬರಲಿ ಆಡಳಿತದಲ್ಲಿರುವರು ಅಕ್ರಮವಾಗಿ ಲೂಟಿ ಹೊಡೆಯುತ್ತಿರುವುದು ಎಲ್ಲರಿಗೆ ತಿಳಿದ ವಿಚಾರ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಅಂದರೆ ಮಡದಿ ಪಾರ್ವತಿಗೆ ಸೇರಿದ ಜಾಮೀನು ಮೋಸದಿಂದ ಜಮೀನನ್ನು ತಮ್ಮ ಚಿಕ್ಕಪ್ಪ ಮಾರಾಟ ಮಾಡಿದ್ದಾರೆ ಅಂತ ಮೂಲ ಜಮೀನಿನ ಮಾಲೀಕರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ರಾಜ್ಯದಲ್ಲಿ ಇಂತಹ ಪ್ರಕರಣಗಳು ಅತಿಹೆಚ್ಚಿದೆ ಇನ್ನೂ ಮೂಲ ಮಾಲೀಕರಾದ ಜಮೀನಿನ ಕುಟುಂಬಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಕುಟುಂಬಸ್ಥರಿಗೆ ಆಗಿರು ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸುವಂತೆ ಮಾಜಿ ಸಚಿವರ ಎನ್. ಮಹೇಶ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.